fbpx
ಸಮಾಚಾರ

“ಮೊಬೈಲ್‌ ಕವರ್‌ನಲ್ಲಿ ತುಳಸಿ ಎಲೆ ಇಟ್ಟರೆ ರೇಡಿಯೇಷನ್ ಕಮ್ಮಿಯಾಗುತ್ತೆ” ಬಾಬಾ ರಾಮ್‍ದೇವ್

ಮೊಬೈಲ್ ಬ್ಯಾಕ್ ಕವರಿನ ಒಳಗಡೆ ಒಂದು ತುಳಸಿ ದಳ ಇಡುವುದರಿಂದ ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಬಹುದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಸಲಹೆ ನಿಡಿದ್ದಾರೆ.

ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುತ್ತಿರುವ ಬೃಹತ್ ಯೋಗ ಶಿಬಿರದಲ್ಲಿ, ರೇಡಿಯೇಷನ್‌ನಿಂದ ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು ಮಠದ ಸಿಬ್ಬಂದಿಯೊಬ್ಬರ ಮೊಬೈಲ್‌ ಪಡೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ನಮ್ಮ ದೇಹಕ್ಕೆ ಅತೀ ಅಪಾಯಕಾರಿಯಾದ ಮೊಬೈಲ್ ಗಳ ವಿಕಿರಣಗಳ ದುಷ್ಪರಿಣಾಮಗಳನ್ನು ತಡೆಯಲು ಮೊಬೈಲಿನ ಹಿಂಬದಿಯ ಕವರಿನ ಒಳಗೆ ಒಂದು ತುಳಸಿ ದಳವನ್ನು ಇಡಿ. ತುಳಸಿ ಎಲೆಗೆ ಮೊಬೈಲ್ ಮಾತ್ರವಲ್ಲದೇ ನಾವು ಬಳಸುವ ಯಾವುದೇ ಇಲೆಕ್ಟ್ರಾನಿಕ್ ಉತ್ಪನ್ನಗಳ ವಿಕಿರಣ ದುಷ್ಪರಿಣಾಮಗಳನ್ನು ತಡೆಯುವ ಅದ್ಭುತ ಶಕ್ತಿ ಇದೆ. ಪ್ರತೀ ಮನೆ ಕಚೇರಿಗಳಲ್ಲಿ ಸಾಧ್ಯವಾದಷ್ಟು ತುಳಸಿ ಸಸಿಗಳನ್ನು ಬೆಳೆಸಿರಿ ಎಂದು ಬಾಬಾ ರಾಮ್ ದೇವ್ ಕರೆ ನೀಡಿದರು.

ಮನೆಯಲ್ಲಿರುವ ಟಿವಿ, ಲ್ಯಾಪ್​ಟಾಪ್, ಮೊಬೈಲ್, ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ವಿಕಿರಣಗಳನ್ನು ಹೊರಸೂಸುತ್ತವೆ. ಇದರಿಂದ ರಕ್ಷಣೆ ಪಡೆಯಬೇಕಾದರೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ತುಳಸಿ ದಳ ಬಳಸಿ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸುತ್ತಿರುವುದಾಗಿಯೂ ಬಾಬಾ ರಾಮದೇವ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top