fbpx
ಸಮಾಚಾರ

ಯಶ್ ಯಾವಾಗಲೂ ಈ ಮೂವರನ್ನ ಸ್ಪೂರ್ತಿಯಾಗಿಟ್ಟುಕೊಳ್ಳುತ್ತಾರಂತೆ!

ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

 

 

ಜಿಕ್ಯೂ ಇಂಡಿಯಾ ನೀಡುವ ದೇಶದ 50 ಅತ್ಯಂತ ಪ್ರಭಾವಿ ಯುವಕರ ಪಟ್ಟಿಯಲ್ಲಿ ಯಶ್ ಹೆಸರು ಕೂಡ ಸೇರ್ಪಡೆಗೊಂಡಿದೆ. ಈ ಗೌರವ ಸ್ವೀಕರಿಸಲು ಅವರು ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಯಶ್ ಮಾತನಾಡಿದ್ದು ಹಲವಾರು ವಿಚಾರಗಳನ್ನು ಹಂಚಿಕೊಂಡರು.ಇದರ ಜೊತೆಗೆ ನಿಮ್ಮ ರೋಲ್ ಮಾಡೆಲ್ ಯಾರು ಎಂದು ಕೇಳಿದಾಗ ‘ನನಗೆ ಸ್ಫೂರ್ತಿ ನೀಡಿದವರ ಸಾಲಿನಲ್ಲಿ ಸಾಕಷ್ಟು ಜನರು ಇದ್ದಾರೆ. ಪ್ರತಿಯೊಬ್ಬರಿಂದಲೂ ನಾನು ಉತ್ತಮವಾದ ಅಂಶವನ್ನು ಪಡೆದುಕೊಳ್ಳುತ್ತೇನೆ’ ಎಂದು ಯಶ್‌ ಹೇಳಿದ್ದಾರೆ. ಆದರೆ, ಸಂದರ್ಶಕಿ, ‘ಮೂವರು ವ್ಯಕ್ತಿಗಳ ಹೆಸರನ್ನು ಹೇಳಲೇಬೇಕು’ ಎಂದು ಕೇಳಿದರು.

” ನನಗೆ ನಮ್ಮ ಕನ್ನಡದ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರ ಈಗ ಬದುಕಿಲ್ಲ ಆದರೆ ಅವರ ನನಗೆ ಮಾದರಿಯಾಗಿದ್ದಾರೆ. ಕ್ರಿಕೆಟರ್ ಎಂಎಸ್ ಧೋನಿ ಅವರು ಕೂಡ ನನಗೆ ಮಾದರಿ ಅವರ ವರ್ತನೆ ನನಗೆ ತುಂಬಾ ಇಷ್ಟ. ಹಾಗೇ ನೋಡಿದರೆ ನಮ್ಮ ಪ್ರಧಾನ ಮಂತ್ರಿಯವರು ಕೂಡ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top