fbpx
ಸಮಾಚಾರ

ಕೊನೆಗೂ ಮನೆ ಸೇರಿದ ತಪ್ಪಿಸಿಕೊಂಡು ಬಂದಿದ್ದ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧ!

ಇತ್ತೀಚಿಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಅದ್ಬುಲ್ ಖಲೀಲ್ ಎಂಬ ವೃದ್ಧನೊಬ್ಬರು ತಮ್ಮ ಮನೆಯ ವಿಳಾಸ, ಮತ್ತು ಊರು ಯಾವುದು ಎಂಬುದನ್ನು ಮರೆತು ಕಂಗಾಲಾಗಿದ್ದರು. ಈಗ ಅವರು ತಮ್ಮ ಮನೆಯನ್ನು ಸೇರಿಕೊಂಡಿದ್ದಾರೆ.

ನವೆಂಬರ್ 7 ರಂದು ತಪ್ಪಿಸಿಕೊಂಡು ಬಂದಿರುವ ಈ ವ್ಯಕ್ತಿ ತನ್ನ ಹೆಸರು ಅಬ್ದುಲ್ ಖಲೀಲ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ತಾನು ಮರೆವಿನ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಮನೆಯ ವಿಳಾಸ, ಕುಟುಂಬ ಸದಸ್ಯರ ಬಗ್ಗೆ ಮಾಹಿತಿಗಳನ್ನು ಕೇಳಿದರು ಅವುಗಳನ್ನು ಜ್ಞಾಪಿಸಿಕೊಂಡು ಹೇಳುವಷ್ಟು ನೆನಪಿನ ಶಕ್ತಿ ಇವರಿಗೆ ಇರಲಿಲ್ಲ. ಎಷ್ಟು ಭಾರಿ ಕೇಳಿದರೂ ಕೇಳಿದಾಗಲೆಲ್ಲಾ ಒಮ್ಮೆಮ್ಮೆ ಒಂದೊಂದು ಉತ್ತರವನ್ನು ನೀಡುತ್ತಿದ್ದರು.

 

 

ಈ ವ್ಯಕ್ತಿಯನ್ನು ರೋಡಿನಲ್ಲಿ ನೋಡಿದ ಸಾಮಾನ್ಯ ಕನ್ನಡಿಗ ತಂಡದ ಭವ್ಯ ಅವರು ಬಸವನಗುಡಿ ಬೆಂಗಳೂರಿನ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರ ವಿಳಾಸ ಪತ್ತೆ ಮಾಡಿ ಅವರನ್ನು ಮನೆಗೆ ಕಳುಹಿಸಿಕೊಡಲು ಠಾಣಾ ಪೊಲೀಸ್ ಅಧಿಕಾರಿಗಳಾದ ಶ್ರೀ ನಂಜಪ್ಪನವರು ಚುರುಕಾಗಿ ಕಾರ್ಯ ನಿರ್ವಹಿಸಿದ್ದು ಅಬ್ದುಲ್ ಖಲೀಲ್ ಅವರನ್ನು ಮನೆಗೆ ಸೇರಿಸಿದ್ದಾರೆ.

ಅಬ್ದುಲ್ ಖಲೀಲ್ ಅವರು ಕೊಳ್ಳೇಗಾಲದ ಫಿಶ್ ಪಾರ್ಕ್ ನಿವಾಸಿ ಎಂಬುದನ್ನು ಪತ್ತೆ ಹಚ್ಚಿದ ಶ್ರೀ ನಂಜಪ್ಪ ಅವರು ಅವರ ಮಗನನ್ನು ಕರೆಸಿ ತಂದೆಯನ್ನ ಅವರ ಜೊತೆ ಕಳುಹಿಸಿದ್ದಾರೆ. ಮಗ ಕರೆದುಕೊಂಡು ಹೋಗುವವರೆಗೂ ಅಬ್ದುಲ್ ಖಲೀಲ್ ಅವರನ್ನು ವೃದ್ಧಾಶ್ರಮದಲ್ಲಿ ಉಳಿದುಕೊಳ್ಳಲು ಪೊಲೀಸ್ ಅಧಿಕಾರಿ ನಂಜಪ್ಪ ಅವರು ವ್ಯವಸ್ಥೆ ಮಾಡಿದ್ದರು.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top