fbpx
ಸಮಾಚಾರ

ಪ್ರೀತಿಯಲ್ಲಿ ಬಿದ್ದ ಗೂಗ್ಲಿ ಬೆಡಗಿ: ಸಹನಟನೊಂದಿಗೆ ಡೇಟಿಂಗ್​ ನಡೆಸುತ್ತಿರುವುದನ್ನು ಒಪ್ಪಿಕೊಂಡ ಕೃತಿ ಕರಬಂದ!

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಅಫೇರುಗಳ ಮೂಲಕ ಸದ್ದು ಮಾಡೋದೇ ಹೆಚ್ಚು. ಸ್ಯಾಂಡಲ್ ವುಡ್ ನಲ್ಲಿ ತನ್ನ ನಟನೆಯ ಖದರಿನಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ಇದೀಗ ಬಾಲಿವುಡ್ ನಲ್ಲಿಯೂ ಮಿಂಚುತ್ತಿರೋ ಕೃತಿ ಕರಬಂದ ಅವರನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಸಿನಿಮಾ ಮಂದಿಯ ಮದುವೆ, ಅಫೇರು ವಿಚಾರಗಳಲ್ಲಿ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಗೂಗ್ಲಿ ಬೆಡಗಿ ತಾನು ಡೇಟಿಂಗ್ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

 

 

ಇದಕ್ಕೂ ಮುಂಚೆ ತಮ್ಮ ಡೇಟಿಂಗ್​ ಬಗ್ಗೆ ಕೇಳಿಬರುತ್ತಿದ್ದ ಮಾತುಗಳನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದ ಕೃತಿ, ಈ ಬಾರಿ ತಂದೆ-ತಾಯಿ ಪರಿಚಯಿಸುವ ಮುನ್ನವೇ ಸ್ವತಃ ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ಅಂದಹಾಗೆ ಕೃತಿ, ಪಗಲ್​ಪಂತಿ ಚಿತ್ರದ ಸಹನಟ ಪುಲಕಿತ್​ ಸಾಮ್ರಾಟ್​ರೊಂದಿಗೆ ಡೇಟಿಂಗ್​ ನಡೆಸುತ್ತಿರುವುದನ್ನು ಮಾಧ್ಯಮ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕೃತಿ, “ಹರಿದಾಡುತ್ತಿರುವ ಸುದ್ದಿ ರೂಮರ್ಸ್ ಆಲ್ಲ ನಿಜ. ನಾನು ಮತ್ತು ಪುಲ್ಕಿತ್ ಇಬ್ಬರು ಡೇಟಿಂಗ್ ನಲ್ಲಿ ಇದ್ದೀವಿ. ನಾನು ಒಬ್ಬರ ಜೊತೆ ಡೇಟಿಂಗ್ ನಲ್ಲಿ ಇದ್ದೀನಿ ಎನ್ನುವುದು ಮೊದಲು ನನ್ನ ತಂದೆ-ತಾಯಿಗೆ ಗೊತ್ತಾಗಬೇಕು. ಕೆಲವು ಸಲ ಗೊತ್ತಾಗಲು ಐದು ವರ್ಷ ಹಿಡಿಯ ಬಹುದು. ಆದರೆ ನನ್ನ ವಿಷಯದಲ್ಲಿ ಐದು ತಿಂಗಳು ಸಾಕಾಯಿತು. ನಾನು ಈಗ ತುಂಬ ಸಂತೋಷವಾಗಿದ್ದೀನಿ” ಎಂದು ಹೇಳಿಕೊಂಡಿದ್ದಾರೆ.

ಪಾಗಲ್ ಪಂತಿ ಸಿನಿಮಾದಲ್ಲಿ ಎರಡನೇ ಬಾರಿ ಜೊತೆಯಾಗಿರುವ ಕೃತಿ ಮತ್ತು ಸಾಮ್ರಾಟ್ ಒಬ್ಬರಿಗೊಬ್ಬರು ಮೆಸೇಜ್, ಹೂಗುಚ್ಛ ಕಳುಹಿಸುವ ಮೂಲಕ ತಮ್ಮ ಪ್ರೀತಿಯ ಸುಳಿವು ನೀಡಿದ್ದಾರೆ. ಸಾಮ್ರಾಟ್ ಪ್ರತಿದಿನ ಶೂಟಿಂಗ್ ಮುನ್ನ ಕೃತಿ ಮೇಕಪ್ ಕೋಣೆಗೆ ಚಾಕೋಲೇಟ್ ಮತ್ತು ಹೂಗುಚ್ಛ ಕಳುಹಿಸುತ್ತಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ ‘ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿತ್ತು. ಎಂದು ವರದಿಯಾಗಿತ್ತು.

ಅಂದಹಾಗೆ ಪುಲಕಿತ್​ ಈಗಾಗಲೇ ಮದುವೆ ಆಗಿದ್ದು ವಿಚ್ಛೇದನ ಪಡೆದುಕೊಂಡಿದ್ದಾರೆ. 2014ರಲ್ಲಿ ಶ್ವೇತಾ ರೊಹಿರಾ ಎಂಬುವರನ್ನು ವರಿಸಿದ್ದರು. ಬಳಿಕ 2015ರಲ್ಲಿ ದೂರವಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top