fbpx
ಸಮಾಚಾರ

ಯಶ್ ನೋಡಲು ಫಿಲಿಫೈನ್ಸ್‌ನಿಂದ ಬಂದ ಅಭಿಮಾನಿ!

ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್, ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಕಿಂಗ್ ಸ್ಟಾರ್ ನೋಡಲು ಫಿಲಿಪೈನ್ಸ್ ನಿಂದ ಬಂದ ಅಭಿಮಾನಿಯೊಬ್ಬರು ಭಾರತಕ್ಕೆ ಬಂದಿದ್ದಾರೆ.

 

 

ಹೌದು! ಫಿಲಿಫೈನ್ಸ್ ದೇಶದ ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ ಇದೀಗ ಬೆಂಗಳೂರಿಗೆ ಆಗಮಿಸಿದ್ದು “ನಾನು ಯಶ್ ಅಭಿಮಾನಿ, ಅವರನ್ನು ನೋಡಬೇಕು ಎಂದು ಬಂದಿದ್ದೇನೆ. ನನಗೆ ಸಹಾಯ ಮಾಡಿ” ಎಂದು ಅಶೋಕ್ ಜೋರ್ನಲ್ ಸಾಮಾಜಿಕ ತಾಣದಲ್ಲಿ ಮನವಿ ಮಾಡಿದ್ದಾರೆ.

ಏರ್‌ಪೋರ್ಟ್‌ ನರ್ಸ್ ಆಗಿ ಕೆಲಸ ಮಾಡುತ್ತಿರಿವ ಅಶೋಕ್ ಜೋರ್ನಲ್ “ಕೆಜಿಎಫ್” ನಲ್ಲಿ ಯಶ ಅಭಿನಯ ಹಾಗೂ ಅವರು “ಯಶೋಮಾರ್ಗ” ಮೂಲಕ ಮಾಡುತ್ತಿರುವ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ನವೆಂಬರ್ 20ಕ್ಕೆ ಅವರು ತಮ್ಮ ಸ್ವಂತ ದೇಶಕ್ಕೆ ಮರಳಬೇಕಿದ್ದು ಅಷ್ಟರಲ್ಲಿ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಬೇಕೆಂಬುದು ಅಶೋಕ್ ಜೋರ್ನಲ್ ಹಂಬಲವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top