fbpx
ಸಮಾಚಾರ

ಹೊರನಾಡು ದೇವಿ ಮಹಾತ್ಮೆ: ಅನ್ನಪೂರ್ಣೇಶ್ವರಿಯೇ ಜೈನರ ಪದ್ಮಾವತಿಯೇ?

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ ಅನ್ನದಾನದ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಅನ್ನಪೂರ್ಣೇಶ್ವರಿ ಈ ಕ್ಷೇತ್ರದ ಆದಿದೇವತೆ. ಅನ್ನದಾನ ಹಾಗೂ ಆತಿಥ್ಯ ಈ ಕ್ಷೇತ್ರದ ವಿಶೇಷತೆ. ಅನ್ನಪೂರ್ಣೇಶ್ವರಿಯ ಸನ್ನಿಧಿಗೆ ಬರುವ ಪ್ರತಿಯೊಬ್ಬ ಭಕ್ತರೂ ಕೂಡ ಇಲ್ಲಿ ಪ್ರಸಾದ ಸ್ವೀಕರಿಸುವುದು ಈ ಕ್ಷೇತ್ರದ ವಿಶೇಷವಾಗಿದೆ.

ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಇತಿಹಾಸ ಕೂಡ ಇದೆ. ಅನ್ನಪೂಣೇಶ್ವರಿ ತಾಯಿಯ ಕೃಪೆಗೆ ಪಾತ್ರರಾದವರಿಗೆ ಜೀವನದ ಉದ್ದಕ್ಕೂ ಅನ್ನ ಸಿಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ವರ್ಷವಿಡೀ ಲಕ್ಷಾಂತರ ಭಕ್ತರು ಹೊರನಾಡಿಗೆ ಬಂದು ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸುತ್ತಾರೆ. ಯಾವುದೇ ಸಮಯದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿದರೂ, ಊಟ ದೊರೆಯುವಂತೆ ಮಾಡುವುದು ಈ ಅನ್ನಪೂರ್ಣೇಶ್ವರಿಯ ಮಹಿಮೆ.

ಅನ್ನಪೂರ್ಣ ಎಂಬ ಪದವು ಎರಡು ಪದಗಳಿಂದ ಮಾಡಲ್ಪಟ್ಟಿದೆ, ಅಣ್ಣಾ ಎಂದರೆ ಧಾನ್ಯಗಳು ಅಥವಾ ಆಹಾರ ಮತ್ತು ಪೂರ್ಣ ಎಂದರೆ ಪರಿಪೂರ್ಣ ಮತ್ತು ಸಂಪೂರ್ಣ. ಆದ್ದರಿಂದ, ಅನ್ನಪೂರ್ಣ ಎಂದರೆ ಸಂಪೂರ್ಣ ಅಥವಾ ಪರಿಪೂರ್ಣ ಆಹಾರ. ಶ್ರೀ ಅನ್ನಪೂರ್ಣೇಶ್ವರಿ ಶಿವನ ಪತ್ನಿ ಪಾರ್ವತಿ ದೇವಿಯ ಅವತಾರ ಎಂದು ನಂಬಲಾಗಿದೆ.

ಅನ್ನಪೂರ್ಣೇಶ್ವರಿ ದೇವಿಯನ್ನು ಇಲ್ಲಿ ಪೀಠದ ಮೇಲೆ ನಿಂತಿರುವ ಭಂಗಿಯಲ್ಲಿ ಕಾಣಬಹುದು. ಅವಳು ಶಂಕು, ಚಕ್ರ, ಶ್ರೀ ಚಕ್ರ ಮತ್ತು ದೇವಿ ಗಾಯತ್ರಿಗಳನ್ನು ತನ್ನ ನಾಲ್ಕು ಕೈಯಲ್ಲಿ ಹಿಡಿದಿದ್ದಾಳೆ. ಈ ವಿಗ್ರಹವನ್ನು ತಲೆಯಿಂದ ಕಾಲಿನವರೆಗೆ ಚಿನ್ನದಿಂದ ಮುಚ್ಚಲಾಗುತ್ತದೆ, ಮತ್ತು ದೇವಿ ಅನಪೂರ್ಣಾಗೆ ಎಷ್ಟು ಭೇಟಿ ನೀಡುತ್ತಾರೋ, ಅವರ ಜೀವನದಲ್ಲಿ ಆಹಾರವಿಲ್ಲದೆ ಎಂದಿಗೂ ಆಗುವುದಿಲ್ಲ ಎಂದು ನಂಬಲಾಗಿದೆ.

ಸ್ಥಳ ಪುರಾಣ:
“ಒಮ್ಮೆ ಪಾರ್ವತಿ ಪರಮಶಿವನೊಂದಿಗೆ ಪಗಡೆ ಆಡುವಾಗ ಇಬ್ಬರ ನಡುವೆ ಜಗಳವಾಯಿತಂತೆ. ಆಗ ಸಿಟ್ಟಲ್ಲಿ ಶಿವ ಭೂಮಿ ಮೇಲೆ ಎಲ್ಲವೂ ಮಾಯವಾಗಬೇಕೆನ್ನುತ್ತಾನೆ. ಆದರೆ, ಅನ್ನ ಎಲ್ಲರಿಗೂ ಸಿಗಬೇಕೆಂದ ಪಾರ್ವತಿ, ಈ ಹೊರನಾಡಿನಲ್ಲಿ ಬಂದು ನೆಲೆಸುತ್ತಾಳೆ. ಕರುಣೆ ನೋಡುತ್ತಾ ಪಾರ್ವತಿ ದೇವಿಯು ಕಾಣಿಸಿಕೊಂಡು ಎಲ್ಲರಿಗೂ ಆಹಾರವನ್ನು ವಿತರಿಸಿದಳು. ಮತ್ತು ಅಂದಿನಿಂದ ಅವಳನ್ನು ದೇವಿ ಅನ್ನಪೂರ್ಣ ಎಂದು ಕರೆಯಲಾಗುತ್ತದೆ.” ಎಂದು ಪುರಾಣ ಕತೆ ಹೇಳುತ್ತದೆ.

ಇನ್ನೊಂದು ಪುರಾಣ ಕತೆ:
ಬ್ರಹ್ಮನ ತಲೆಯನ್ನು ಶಿವನ್ನೊಮ್ಮೆ ಕಡಿಯುತ್ತಾನೆ. ಬ್ರಹ್ಮನ ಬುರುಡೆ ಶಿವನ ಕೈಗೆ ಅಂಟಿದ್ದು ಬಿಡುವುದಿಲ್ಲ. ಅದು ತುಂಬುವಷ್ಟು ದವಸ ಧಾನ್ಯಗಳನ್ನು ತುಂಬ ಬೇಕಿತ್ತು. ಅದೂ ಎಲ್ಲಿಯೂ ಸಾಧ್ಯವಾಗದಿದ್ದಾಗ, ಅನ್ನಪೂರ್ಣೇಶ್ವರಿ ಎದುರು ತಲೆ ಬಾಗುತ್ತಾನೆ ಶಿವ. ಆಗ ಬುರುಡೆ ತುಂಬಿ, ಶಿವನ ಕೈಯಿಂದ ಬುರುಡೆ ಕೆಳಗೆ ಬೀಳುತ್ತದೆ ಎಂಬ ಮತ್ತೊಂದು ಪುರಾಣ ಕಥೆಯೊಂದಿದೆ.

ಅನ್ನಪೂರ್ಣೆಯೇ ಜೈನರ ಪದ್ಮಾವತಿಯೇ?
“ತಾಯಿ ಅನ್ನಪೂರ್ಣೇಶ್ವರಿ ವಿಗ್ರಹದ ಕಿರೀಟದ ಮೇಲೆ ಜೈನ ತೀರ್ಥಂಕರರ ಮೂರ್ತಿಯನ್ನು ಕೆತ್ತಲಾಗಿದೆ. ಹಿಂದಿನ ಕಾಲದಲ್ಲಿ ಇದು ಜೈನಯಕ್ಷಿ ಪದ್ಮಾವತಿ ಆಗಿದ್ದಳು ಎಂಬುದಕ್ಕೆ ಸಾಕ್ಷಿ ಎಂದು ಜೈನರು ವಾದಿಸುತ್ತಾರೆ.

 

 


 

ಜನರ ನಂಬಿಕೆ:
ಇನ್ನು ಆನ್ನಪೂರ್ಣೇಶ್ವರಿಯ ಕೃಪೆ ಇದ್ದರೆ ಒಳ್ಳೆಯ ಬೆಳೆ ಬರುತ್ತದೆ ಎನ್ನುವ ನಂಬಿಕೆ ಹೊರನಾಡು ಸುತ್ತಮುತ್ತಲಿನ ರೈತರ ಗ್ರಾಮಸ್ಥರ ನಂಬಿಕೆಯಾಗಿದೆ. ಹೀಗಾಗಿ ವರ್ಷಕ್ಕೊಮ್ಮೆ ತಾವು ಬೆಳೆದ ಭತ್ತ ,ಅಡಿಕೆ, ಕಾಫಿ, ಏಲಕ್ಕಿ, ಕಾಳು ಮೆಣಸು ಇತ್ಯಾದಿ ಉತ್ಪನ್ನಗಳನ್ನು ತಾಯಿಯ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ತಂದು ಒಪ್ಪಿಸುವ ಸಂಪ್ರದಾಯ ಕೂಡ ಇದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಭಕ್ತರು ಬೇಡಿದ್ದನ್ನು ಕರುಣಿಸುವ ಕರುಣಿಸುತ್ತಾಳೆ ಎನ್ನುವ ನಂಬಿಕೆಯಿಂದ ಭಕ್ತರು ಹಲವು ಬಗೆಯ ಹರಕೆಯನ್ನು ಮಾಡಿಕೊಳ್ಳುತ್ತಾರೆ. ಸಂತಾನ, ಆರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು, ಇತ್ಯಾದಿಗಳನ್ನು ಕರುಣಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ ಬೇಡಿದ್ದು ದಕ್ಕಿದಾಗ ಹರಕೆ ತೀರಿಸಲು ಮತ್ತೆ ಬರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top