fbpx
ಸಮಾಚಾರ

ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ‘ಒಡೆಯ’ ರಿಲೀಸ್ ಡೇಟ್ ಫಿಕ್ಸ್!

ದರ್ಶನ್ ಅಭಿನಯದ ಬಹು ನಿರೀಕ್ಷೆಯ ‘ಒಡೆಯ’ ಚಿತ್ರದ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ‘ಒಡೆಯ’ ಸಿನಿಮಾ ಮುಂದಿನ ತಿಂಗಳು ’12’ಕ್ಕೆ ತೆರೆಗೆ ಬರಲು ರೆಡಿಯಾಗಿದೆಯಂತೆ. ಸೆನ್ಸಾರ್ ಮಂಡಳಿ ಅಧಿಕೃತ ಪ್ರಮಾಣ ಪತ್ರ ನೀಡಿದ ಬಳಿಕ ಸಿನಿಮಾ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಅನೌನ್ಸ್ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ಇನ್ನು ಇದೇ ಡಿಸೆಂಬರ್ 1 ರಂದು ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.

ಈ ಮೊದಲು ಒಡೆಯ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಡಿಸೆಂಬರ್ 20 ರಂದು ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಸಿನಿಮಾ ತೆರೆಗೆ ಬರೋದ್ರಿಂದ ಎರಡೂ ಸಿನಿಮಾಗಳು ಕ್ಲಾಷ್ ಆಗಲಿವೆ ಅನ್ನೋ ಕಾರಣಕ್ಕೆ ಒಂದು ವಾರ ಮುಂಚಿತವಾಗಿಯೇ ಒಡೆಯ ಸಿನಿಮಾ ರಿಲೀಸ್ ​​​​​​​​​​​​​​​​​​​​ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿದೆ.

‘ಒಡೆಯ’ ಚಿತ್ರವು ಸಹೋದರರ ಕಥಾವಸ್ತುವನ್ನು ಒಳಗೊಂಡಿದ್ದು ನಾಯಕ ದರ್ಶನ್’ಗೆ ಚಿತ್ರದಲ್ಲಿ ನಾಲ್ವರು ತಮ್ಮಂದಿರುವ ಇರಲಿದ್ದಾರೆ.ಈಗ ಆ ಪಾತ್ರಗಳಿಗೆ ಕಲಾವಿದರ ಆಯ್ಕೆ ಅಂತಿಮವಾಗಿದ್ದು ಯಶಸ್, ಪಂಕಜ್ ನಾರಾಯಣ್, ನಿರಂಜನ್ ಹಾಗೂ ಸಮರ್ಥ್ ದರ್ಶನ್ ತಮ್ಮಂದಿರಾಗಿ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದು ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಈ ಸಿನಿಮಾ ತಮಿಳು ಸೂಪರ್ ಹಿಟ್ ಆಗಿದ್ದ ‘ವೀರಂ’ ಚಿತ್ರದ ಅಫೀಶಿಯಲ್ ರಿಮೇಕ್. ತಮಿಳಿನಲ್ಲಿ ಅಜಿತ್ ನಟಿಸಿದ್ದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು ತಮ್ಮನ್ನಾಳ ಪಾತ್ರವನ್ನು ಕೊಡಗಿನ ಹುಡುಗಿ ರಾಘವಿ ಮಾಡುತ್ತಿದ್ದಾರೆ.. ಅಂದಹಾಗೆ ಇದಕ್ಕೂ ಮುಂಚೆ ವೀರಂ ಚಿತ್ರವನ್ನು ತೆಲುಗಿನ ಪವನ್ ಕಲ್ಯಾಣ್ ‘ಕಾಟಮರಾಯುಡು’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top