fbpx
ಸಮಾಚಾರ

“ಹೌದು, ನಾನು ಪ್ರೀತಿಸುತ್ತಿರೋದು ನಿಜ” ರಶ್ಮಿಕಾ ಮಂದಣ್ಣ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಧ್ವನಿಯೆತ್ತಿದ ವಿಚಾರಗಳೇ ಹೆಚ್ಚು ರಾರಾಜಿಸುತ್ತಿದೆ. ಕೆಲ ದಿನಗಳ ಹಿಂದೆ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ ಎಂದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರದ ದಿನಗಳಲ್ಲಿ ಟ್ರಾಲ್ ವಿಚಾರವಾಗಿ ರಶ್ಮಿಕಾ ಸುದ್ದಿಯಾಗಿದ್ದರು. ಈ ನಡುವೆ ರಶ್ಮಿಕಾ ಮಂದಣ್ಣ ತೆಲುಗು ನಟನನ್ನು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಈ ಬಗ್ಗೆ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ರಶ್ಮಿಕಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ತೆಲುಗು ನಟನನ್ನು ಪ್ರೀತಿಸುತ್ತಿರುವ ಗಾಸಿಪ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ, ಹೌದು. ನಾನು ಪ್ರೀತಿಸುತ್ತಿರುವುದು ನಿಜ. ಆದರೆ ನಾನು ನನ್ನ ಸಿನಿಮಾವನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನನಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಈಗ ನನಗೆ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ನಿಜಕ್ಕೂ ಖುಷಿ ಇದೆ. ನಾನು ಚಿತ್ರಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮೇಕಪ್ ಬಗ್ಗೆ ತಿಳಿಸಿರುವ ರಶ್ಮಿಕಾ ನನಗೆ ಮೇಕಪ್ ಮಾಡಿಕೊಳ್ಳುವುದು ಇಷ್ಟವಿಲ್ಲ. ಮೇಕಪ್ ಮಾಡುವುದು ಕೂಡ ಕಷ್ಟದ ಕೆಲಸ. ನಾನು ಸಿನಿಮಾಗಾಗಿ ಮೇಕಪ್ ಮಾಡುತ್ತೀನಿ ಹೊರತು, ನಿಜ ಜೀವನದಲ್ಲಿ ಮೇಕಪ್ ಇಲ್ಲದೆ ಇರುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಅವರು ಮಹೇಶ್ ಬಾಬು ಜೊತೆ ಸರಿಲೆರು ನಿಕ್ಕೇವರು ಚಿತ್ರದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ನಿತಿನ್ ಅಭಿನಯದ ಭೀಷ್ಮಾ ಸಿನಿಮಾದಲ್ಲೂ ಸ್ಯಾಂಡಲ್​ವುಡ್ ಸಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಪೊಗರು ಚಿತ್ರದ ಮೂಲಕ ಡಿಯರ್ ರಶ್ಮಿಕಾ ಕನ್ನಡಕ್ಕೂ ಮರಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top