fbpx
ಸಮಾಚಾರ

2020 ಐಪಿಎಲ್​ಗೆ ಹೊಸ ತಂಡ ಸೇರ್ಪಡೆ; ಈ ಬಾರಿ ಪ್ರಶಸ್ತಿಗಾಗಿ 9 ತಂಡಗಳ ಕಾದಾಟ?

ಪ್ರೀಮಿಯರ್ ಲೀಗ್ (ಐಪಿಎಲ್) 2020ರ ನಂತರದ ಆವೃತ್ತಿಗಳಲ್ಲಿ ಇನ್ನೆರಡು ಹೊಸ ತಂಡಗಳು ಮೈದಾನಕ್ಕಿಳಿಯಲಿವೆ ಎಂಬ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಕೇಳಿಬಂದಿತ್ತು. ಆದರೆ ಈಗಿನ ಮಾಹಿತಿಯಂತೆ ಬಿಸಿಸಿಐಯು ಭವಿಷ್ಯದಲ್ಲಿ 10 ತಂಡಗಳ ಬದಲಿಗೆ 9 ತಂಡಗಳನ್ನು ಸ್ಪರ್ಧೆಗಿಳಿಸುವತ್ತ ಯೋಚಿಸುತ್ತಿದೆ ಎನ್ನಲಾಗುತ್ತಿದೆ.

ಎಲ್ಲಾದರು 10 ತಂಡ ಕಣಕ್ಕಿಳಿದರೆ 90ಕ್ಕೂ ಅಧಿಕ ಪಂದ್ಯ ಟೂರ್ನಿಯಲ್ಲಿ ಆಯೋಜಿಸಬೇಕಾಗುತ್ತದೆ. ಇದು ಈಗಿನ ಸಂದರ್ಭದಲ್ಲಿ ಕಷ್ಟ. 9 ತಂಡವಾದರೆ 76 ಪಂದ್ಯ ಆಯೋಜಿಸಬಹುದು. ಹೀಗಾಗಿ ಈ ಬಾರಿ 8+1 ತಂಡವನ್ನು ಆಡಿಸುವ ಅಂದಾಜಿನಲ್ಲಿದೆ ಬಿಸಿಸಿಐ. ಐಪಿಎಲ್ ಉನ್ನತಾಧಿಕಾರಿಗಳು ಡಿಸೆಂಬರ್ 1 ರಂದು ಸಭೆ ಸೇರಿ ಚರ್ಚಿಸಿದ್ದು, 2020ರಲ್ಲಿ ಒಂದು ಹೊಸ ಫ್ರಾಂಚೈಸಿ ಪರಿಚಯಿಸುವ ನಿರ್ಧಾರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

2020ರಲ್ಲಿ ಐಪಿಎಲ್ ಅವಧಿವೇಳೆ ದ್ವಿಪಕ್ಷೀಯ ಸರಣಿ, ಐಸಿಸಿ ಸರಣಿ ಇರುವುದರಿಂದ ಹೆಚ್ಚಿನ ಸಮಯಾವಕಾಶವಿಲ್ಲ. ಹೀಗಾಗಿ ಒಂದು ತಂಡ ಸೇರಿಸಿ, ಪ್ರಯೋಗ ಮಾಡಲು ಮುಂದಾಗಿದೆ. 2021 ಹಾಗೂ 2022ರ ಆವೃತ್ತಿಗಳಲ್ಲಿ 9 ತಂಡ ಹಾಗೂ 2023ರ ಆವೃತ್ತಿಗಳಲ್ಲಿ 10 ತಂಡದ ಜೊತೆ ಆಡುವ ಯೋಜನೆ ಹಾಕಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top