fbpx
ಸಮಾಚಾರ

“ಜಾಗತಿಕ ತಾಪಮಾನ ಹೆಚ್ಚಳಕ್ಕೆ ಮಾಂಸಾಹಾರ ಸೇವನೆಯೇ ಕಾರಣ” ಬಾಬಾ ರಾಮದೇವ್

ತುಳಸಿ ಎಲೆಯನ್ನು ಮೊಬೈಲ್ ಕವರ್ ನಲ್ಲಿ ಇಟ್ಟುಕೊಂಡರೆ ಮೊಬೈಲ್‌ ರೆಡಿಯೇಶನ್‌ ಕಡಿಮೆಯಾಗುತ್ತದೆ ಎಂದು ಶನಿವಾರ ಹೇಳಿದ್ದ ಬಾಬಾ ರಾಮ್‌ದೇವ್‌, ಮಾಂಸಾಹಾರ ಸೇವನೆಯಿಂದ ಜಾಗತಿಕ ತಾಪಮಾನ ಹೆಚ್ಚುತ್ತದೆ ಎನ್ನುವ ವಾದವನ್ನು ಮಂಗಳವಾರ ಮಂಡಿಸಿದ್ದಾರೆ.

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಸಂತ ಸಮ್ಮೇಳನ ನಡೆದಿದ್ದು, ಸಭೆಯಲ್ಲಿ ಅಷ್ಟ ಮಠದ ಸ್ವಾಮೀಜಿಗಳು ಸೇರಿದಂತೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯ 18 ಸಂತರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ರಾಮ್ ದೇವ್ “ಇಂದು ವಿಜ್ಞಾನಿಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ನಾನಾ ಕಾರಣಗಳನ್ನು ಕಂಡು ಹಿಡಿಯುತ್ತಿದ್ದಾರೆ. ಆದರೆ ನಿಜವಾದ ಕಾರಣ ಮಾಂಸಾಹಾರ ಹೆಚ್ಚಾಗಿರುವುದೇ ಕಾರಣ, ಇದನ್ನೇ ವಿಜ್ಞಾನಿಗಳು ಪತ್ತೆ ಮಾಡಿಲ್ಲ” ಎಂದು ಹೇಳಿಲ್ಲ.

“ಮಾಂಸವೇ ನಮ್ಮ ಆಹಾರ ಎನ್ನುವವರಿಗೆ ತಿನ್ನಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ ನಿಮಗೆ ತಿನ್ನುವುದಕ್ಕೆ ಕುದುರೆ ಇದೆ, ಕತ್ತೆ ಇದೆ, ನಾಯಿ ಇದೆ, ಮೀನು ಇದೆ, ಕೋಣಗಳಿವೆ ಅವುಗಳನ್ನು ತಿನ್ನಿ, ಅವುಗಳನ್ನು ಬಿಟ್ಟು ನಾವು ಪೂಜಿಸುವ ಗೋವುಗಳನ್ನು ಯಾಕೆ ತಿನ್ನುತ್ತೀರಿ. ಗೋವು ತಾಯಿಗೆ ಸಮಾನ. ಅದನ್ನು ತಿನ್ನುತ್ತಿರಿ ಅಂದ್ರೆ ನಿಮ್ಮ ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ” ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top