fbpx
ಸಮಾಚಾರ

“ಯಡಿಯೂರಪ್ಪ ಹಾಲು ನೀಡೋ ಕಾಮಧೇನು, ಅಭಿವೃದ್ದಿಗಾಗಿ ಹಿಂಡ್ಕೊಳ್ತೀನಿ” ಬಿಸಿ ಪಾಟೀಲ್.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಂದು ರೀತಿ ಕಾಮಧೇನು ಇದ್ದಂತೆ, ಅವರಿಂದ ಕ್ಷೇತ್ರಕ್ಕೆ, ಜಿಲ್ಲೆಗೆ ಬೇಕಾಗಿದ್ದೆಲ್ಲವನ್ನೂ ಹಿಂಡ್ಕೊಳ್ತೆನೆಂದು ಹೇಳಿದ್ದು ಬೇರಾರು ಅಲ್ಲ, ಹಿರೆಕೇರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಬಿ.ಸಿ.ಪಾಟೀಲ್. ಹಿರೆಕೇರೂರಿನ ಚುನಾವಣಾ ಪ್ರಚಾರದಲ್ಲಿ ಈ ರೀತಿ ಹೇಳಿದ್ದಾರೆ.

“ರಾಜೀನಾಮೆ ನೀಡಿದ ಮೇಲೆ ಹಿರೇಕೆರೂರು ಕ್ಷೇತ್ರಕ್ಕೆ 250 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ರಾಜೀನಾಮೆ ನೀಡಿದ್ದಕ್ಕೂ ಸಾರ್ಥಕ ಆಯ್ತು. ನಾನು ಶಾಸಕನಾಗಿ ಆಯ್ಕೆಯಾದ 24 ಗಂಟೆಯೊಳಗೆ ಸಚಿವರನ್ನಾಗಿ ಮಾಡುವುದಾಗಿ ಸಿಎಂ ಬಿಎಸ್​​ವೈ ಭರವಸೆ ನೀಡಿದ್ದಾರೆ,” ಎಂದು ಬಿ.ಸಿ.ಪಾಟೀಲ್​ ಹೇಳಿದರು.

“ಬಿ ಸಿ ಪಾಟೀಲ್ ಅವರನ್ನು ಚುನಾವಣೆಗೆ ನಿಲ್ಲಿಸಬೇಕು, ಹೀಗಾಗಿ ಬಣಕಾರ್ ನೀವು ತ್ಯಾಗ ಮಾಡಬೇಕು ಅಂತ ಸಿಎಂ ಹೇಳಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಅಂತ ಯುಬಿ ಬಣಕಾರ್ ತ್ಯಾಗ ಮಾಡಿದ್ದರು. ಈಗ ಇಬ್ಬರು ಜೊತೆಯಲ್ಲಿ ಇದ್ದೇವೆ ಎಂದರು. ಅವರು ಸಿಎಂ ಆಗುವುದಕ್ಕೆ ನನ್ನ ತ್ಯಾಗ, ಸರ್ಕಾರ ಸುಭದ್ರ ಮಾಡುವುದಕ್ಕೆ ಯುಬಿ ಬಣಕಾರ್ ಮಾಡಿದ ತ್ಯಾಗ,” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top