fbpx
ಸಮಾಚಾರ

“ಯಾರೇ ನೀನು ಚೆಲುವೆ” ನಟಿ ಈಗ ಸಮಾಜಸೇವಕಿ- ಈಕೆಗೆ ಕೈಕೊಟ್ಟ ಆ ಸ್ಟಾರ್ ನಟ ಯಾರು ಗೊತ್ತಾ?

ದೇವ್ರು ಒಂದು ಕೊಟ್ರೆ ಮತ್ತೊಂದನ್ನ ಕಿತ್ತುಕೊಳ್ಳುತ್ತಾನೆ ಅನ್ನೋ ನುಡಿಗಟ್ಟು ಬಹುಷಃ ಈ ನಟಿಯ ಖಾಸಗಿ ಜೀವನಕ್ಕೆ ಸಂಪೂರ್ಣವಾಗಿ ಅನ್ವಯಿಸುವಂತೆ ಕಾಣುತ್ತದೆ. ಏಕೆಂದರೆ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮೆರೆಯುವ ಮುಖೇನ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತಂಗ ತಲುಪಿದ್ದರೂ ಎಲ್ಲೋ ಒಂದು ಕಡೆ ತನ್ನ ಖಾಸಗಿ ಜೀವನದಲ್ಲಿ ಎಡವಿ ಅಷ್ಟೇ ಪಡಬಾರದ ನೋವುಗಳನ್ನ ಪಟ್ಟು ಪಾತಾಳಕ್ಕೆ ಬಿದ್ದುಬಿಟ್ಟಿದ್ದಳು. ಯಾರು ಆ ನಟಿ? ಆಕೆಯ ಪಟ್ಟ ಕಷ್ಟಗಳೇನು? ಈಗ ಆಕೆ ಏನ್ ಮಾಡ್ತಿದ್ದಾಳೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಂದ್ರೆ ಮುಂದೆ ಓದಿ.

 

 

ರವಿಚಂದ್ರನ್ ನಾಯಕನಾಗಿ ನಟಿಸಿದ್ದ “ಯಾರೇ ನೀನು ಚಲುವೇ”ಕಲಾವಿದ”ಚಿತ್ರಗಳ ಮೂಲಕ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದ ನಟಿ ಹೀರಾ ತನ್ನ ಬದುಕಿನಲ್ಲಿ ಏಳುಬೀಳುಗಳನ್ನು ಸಮಾನವಾಗಿ ಕಂಡವಳು. ತನ್ನ ಸೌಂದರ್ಯದಿಂದಲೇ ನೋಡುವವರು ಕಣ್ಣಗಳಿಸುವಂತೆ ಮಾಡುತ್ತಿದ್ದ ಆಕೆ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದ ಕಾಲವದು. ಆ ಸಮಯದಲ್ಲಿ ತಮಿಳು ಚಿತ್ರರಂಗದ ಸೈಡ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈಗಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ ಜೊತೆ ಪ್ರೇಮಪಾಶದಲ್ಲಿ ಬಿದ್ದು ಸ್ವತಃ ತಾನೇ ಆತನಿಗೆ ಉತ್ತಮ ಅವಕಾಶಗಳನ್ನು ಮುಂದೆ ನಿಂತು ಕೊಡಿಸಿದ್ದಳು.

 

 

ಚಿತ್ರರಂಗದಲ್ಲಿ ಅಜಿತ್ ಒಂದು ಹಂತಕ್ಕೆ ಬೆಳೆಯುವವರೆಗೂ ಇವರಿಬ್ಬರ ಸಂಭಂದ ಅನ್ಯೋನ್ಯವಾಗಿಯೇ ಇತ್ತು ಆದರೆ ಯಾವಾಗ ಆತ ಸ್ಟಾರ್ ನಟನಾಗಿ ಬೆಳೆದನೋ ಅಷ್ಟೊತ್ತಿಗಾಗಲೇ ಈಕೆಯ ಮೇಲೆ ತಾತ್ಸಾರದ ಮನೋಭಾವ ಆತನ ತಲೆಗೆ ಆರಿಸಿಕೊಂಡಂತಿತ್ತು. ಆಕೆಯ ಸಹಾಯದಿಂದಲೇ ಸಿನಿಮಾ ಅವಕಾಶಗಳನ್ನು ಬಾಚಿಕೊಂಡಿದ್ದ ಅಜಿತ್ ತದನಂತರ ತನ್ನ ವರಸೆಯನ್ನು ಬದಲಾಯಿಸಿದ್ದ, ಆಕೆಯನ್ನು ದೂರವಿಡಲು ಮಾಡಲು ಶುರುಮಾಡಿದ್ದ. ಅಷ್ಟು ಮಾತ್ರವಲ್ಲದೆ ‘ಆಕೆ ಸರಿ ಇಲ್ಲ, ಡ್ರಕ್ಸ್ ಅಡಿಕ್ಟ್ ಆಗಿದ್ದಾಳೆ, ಅನೈತಿಕ ಸಂಭಂದಗಳನ್ನ ಇಟ್ಟುಕೊಂಡಿದ್ದಾಳೆ” ಎಂಬಂತ ನಾನಾ ಆಪಾದನೆಗಳನ್ನು ಆಕೆಯ ತಲೆಗೆ ಕಟ್ಟಿ ಸಲೀಸಾಗಿ ಆಕೆಗೆ ನಾಮ ತೇದು ಕೈತೊಳೆದುಕೊಂಡಿದ್ದ.

 

 

ಈ ಘಟನೆಯಿಂದ ಅಜಿತ್ ಪ್ರೀತಿಯನ್ನು ಅತಿಯಾಗಿ ಮನಸಿಗೆ ಅಚ್ಚುಕೊಂಡಿದ್ದ ಹೀರಾಗೆ ದೊಡ್ಡ ಮಟ್ಟದಲ್ಲಿ ನೋವನ್ನುಂಟುಮಾಡಿತ್ತು. ಬೇರೆ ದಾರಿಯಿಲ್ಲದೆ ಹೀರಾ ಅಜಿತ್ನಿಂದ ದೂರವಾಗಿ ತನ್ನ ಪೋಷಕರ ಜೊತೆ ಬಂದು ಉಳಿದುಕೊಂಡಳು. ದಿನಗಳು ಕಳೆಯುತ್ತಿದ್ದಂತೆ ಮಗಳ ಈ ಪರಿಸ್ಥಿಯನ್ನು ನೋಡಿ ಸಂಕಟ ಪಡುತ್ತಿದ್ದ ಹೀರಾಳ ಪೋಷಕರು ಕಷ್ಟಪಟ್ಟು ಆಕೆಯನ್ನು ಮದುವೆಗೆ ಒಪ್ಪಿಸಿ ಕೈತುಂಬಾ ಸಂಬಳ ತರುವ ಹುಡುಗನಿಗೇ ಗಂಟು ಹಾಕಿದ್ದರು. ಆರಂಭದಲ್ಲಿ ಆತನೂ ಹೀರಾ ಜೊತೆ ಚನ್ನಾಗಿಯೇ ಸಂಸಾರ ನಡೆಸಿದ್ದ ಆದರೆ ಕಾಲಕ್ರಮೇಣ ಆ ಪುಣ್ಯಾತ್ಮನೂ ಕೂಡ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸಲು ಮುಂದಾದ., ಇಬ್ಬರ ಸಂಭಂದ ಹಳಸಿದ ಪರಿಣಾಮ ಮದುವೆಯಾದ ನಾಲ್ಕೇ ವರ್ಷಕ್ಕೆ ಹಿರಾ ಆತನಿಗೆ ಡೈವೋರ್ಸ್ ನೀಡಿ ಬೇರೆಯಾದಳು.

 

 

ಸೈಕೋಲಜಿ ಸಬ್ಜೆಕ್ಟಿನಲ್ಲಿ ಪದವಿ ಪೂರೈಸಿದ್ದ ಹೀರಾ ಲೌಕಿಕ ಜೀವನದ ಜಂಜಾಟಗಳಿಂದ ಬೇಸತ್ತು ಇವುಗಳ ಸಹವಾಸವೇ ಬೇಡ ಎಂದು ನಿರ್ಧರಿಸಿ ಅವನ್ನೆಲ್ಲಾ ತ್ಯಾಗಮಾಡಿ ಸದ್ಯ ಬಡವರು, ದುರ್ಬಲರ ಏಳಿಗೆಗಾಗಿ ದುಡಿಯುತ್ತಿದ್ದಾಳೆ. ಮಾನಸಿಕ ತಜ್ಞೆಯಾಗಿರುವ ಈಕೆ ಯಾವುದೇ ಹಣ ಅಥವಾ ಫೀಸ್ ಪಡೆದುಕೊಳ್ಳದೇ ಪುಕ್ಕಟೆಯಾಗಿಯೇ ಬಡವರಿಗೆ ಮತ್ತು ದುರ್ಬಲರಿಗೆ ಚಿಕಿತ್ಸೆ ನೀಡುತ್ತಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಹಾಗೆ ಜೀವನದಲ್ಲಿ ನೋವುಂಡು ಜಿಗುಪ್ಸೆಗೊಂಡಿರುವ ಅನೇಕರನ್ನು ಕೌನ್ಸಲಿಂಗ್ ಮಾಡುವ ಮೂಲಕ ಧೈರ್ಯ ತುಂಬುವ ಕೆಲಸದಲ್ಲಿ ತಲ್ಲೆನಳಾಗಿದ್ದಾಳೆ. ಅಲ್ಲದೇ ತಾನು ಚಿತ್ರರಂಗದಲ್ಲಿ ದುಡಿದಿದ್ದ ಹಣವನ್ನೆಲ್ಲಾ ಇದೀಗ ಬಡವರ ಒಳಿತಿಗಾಗಿ ಬಳಸಿಕೊಂಡು ಸಮಾಜಸೇವೆಯಲ್ಲಿ ಜೀವನ ಸಾಗಿಸುತ್ತಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top