fbpx
ಸಮಾಚಾರ

ಖ್ಯಾತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

ಖ್ಯಾತ ತಮಿಳು ನಟ ಹಾಗೂ ಮಕ್ಕಳ್‌ ನೀಧಿ ಮೈಯಂ (ಎಂಎನ್‌ಎಂ) ರಾಜಕೀಯ ಪಕ್ಷದ ಮುಖಂಡ ಕಮಲ್‌ ಹಾಸನ್‌ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ನಾಳೆ( 22 ನವೆಂಬರ್) ಶುಕ್ರವಾರ ಶಸ್ತ್ರಚಿಕಿತ್ಸ ನಡೆಸಿ ಈ ಕಸಿ ತೆಗೆಯಲಾಗುವುದು ಎಂದು ಎಂಎನ್ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಕಲಕಲಾವಲ್ಲಭ ಕಮಲ್ ಹಾಸನ್ ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಬ್ಯುಸಿಯಿದ್ದ ಕಾರಣ ಶಸ್ತ್ರ ಚಿಕಿತ್ಸೆಯನ್ನು ಮುಂದೂಡುತ್ತ ಬಂದಿದ್ದರು. ಈಗ ವೈದ್ಯರ ಸಲಹೆಯ ಮೇರೆಗೆ ಕಮಲ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

‘ರಾಜಕೀಯ ಮತ್ತು ಚಲನಚಿತ್ರ ಬದ್ಧತೆಗಳಲ್ಲಿ ಅವರ ಕಾರ್ಯನಿರತ ವೇಳಾಪಟ್ಟಿ ಕಾರಣದಿಂದಾಗಿ, ಇಂಪ್ಲಾಂಟ್ ಅನ್ನು ತೆಗೆದುಹಾಕುವಲ್ಲಿ ವಿಳಂಭವಾಗಿತ್ತು. ಈಗ ಶುಕ್ರವಾರದಂದು ಶಸ್ತ್ರಚಿಕಿತ್ಸೆ ನಡೆಯಲಿದೆ, ಇದಲ್ಲದೆ, ದೈಹಿಕವಾಗಿ ಗುಣಮುಖವಾಗಲು ಮುಂದಿನ ಕೆಲವು ವಾರಗಳವರೆಗೆ ವಿರಾಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ’ ಎಂದು ಪಕ್ಷ ಹೇಳಿಕೆ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top