fbpx
ಸಮಾಚಾರ

ಐತಿಹಾಸಿಕ ಸಾಧನೆ: ಮೊದಲ ಯತ್ನದಲ್ಲೇ ಅಗ್ರಸ್ಥಾನ, ದೇಶದ ಅತ್ಯಂತ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಯುವಕ!

ರಾಜಸ್ಥಾನ ನ್ಯಾಯಾಂಗ ಸೇವೆ ಪರೀಕ್ಷೆ ಪಾಸಾಗುವ ಮೂಲಕ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್, ದೇಶದ ಅತ್ಯಂತ ಕಿರಿಯ ನ್ಯಾಯಮೂರ್ತಿಯಾಗಿ ದಾಖಲೆ ಬರೆದಿದ್ದಾರೆ. ಜೈಪುರ್ ಮೂಲದ ಮಯಾಂಕ್ ಪ್ರತಾಪ್ 2018ರ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೇವಲ 21 ವರ್ಷದ ವಯೋಮಾನದ ಮಯಾಂಕ್ ಇದೀಗ ದೇಶದ ಅತ್ಯಂತ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜಸ್ಥಾನ ನ್ಯಾಯಾಂಗ ಸೇವೆ (ಆರ್‌ಜೆಎಸ್) 2018ರ ಪರೀಕ್ಷೆಯಲ್ಲಿ 197 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಯಾಂಕ್ ಕೇವಲ 21 ವರ್ಷ 10 ತಿಂಗಳು 9 ದಿನಗಳ ವಯಸ್ಸಿನಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಪ್ರಯತ್ನದಲ್ಲಿ ಅಗ್ರಸ್ಥಾನದಲ್ಲಿ ಪಾಸಾಗಿದ್ದಾರೆ. ಆರ್‌ಜೆಎಸ್ ಪರೀಕ್ಷೆಗೆ ಹಾಜರಾಗಲು ಈ ಹಿಂದೆ ಕನಿಷ್ಠ ವಯಸ್ಸು 23 ನಿಗದಿಯಾಗಿತ್ತು. ಆದರೆ ಈ ವರ್ಷ ಅದನ್ನು 21 ವಯಸ್ಸಿಗೆ ಇಳಿಸಲಾಗಿದೆ.

ಈ ರೀತಿ ವಯೋಮಿತಿ ಇಳಿಸಿರುವುದರಿಂದ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ವೃತ್ತಿಯಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಪರೀಕ್ಷೆ ಬರೆಯಲು ಇರುವ ವಯೋಮಿತಿ ಇಳಿಕೆ ಮಾಡಿದ್ದರಿಂದಲೇ ನಾನು ಪರೀಕ್ಷೆ ಬರೆದೆ. ಕಲಿಯಲು ಮತ್ತು ಕೆಲಸ ಮಾಡಲು ಇದು ನನಗೆ ಸಹಕಾರಿಯಾಗಲಿದೆ. ನಾನು ಕಿರಿಯ ವಯಸ್ಸಿನಲ್ಲಿ ವೃತ್ತಿ ಆರಂಭಿಸುವ ಮೂಲಕ ನನಗೆ ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ನಾನು ಮೊದಲ ಪ್ರಯತ್ನದಲ್ಲೇ ನ್ಯಾಯಾಂಗ ಸೇವಾ ಪರೀಕ್ಷೆ ಪಾಸ್​​ ಮಾಡಲು ನನ್ನ ಶಿಕ್ಷಕರು ಮತ್ತು ಕುಟುಂಬವೇ ಕಾರಣ. ಈ ಮುನ್ನ ನ್ಯಾಯಾಂಗ ಪರೀಕ್ಷೆ ಬರೆಯಲು 23 ವರ್ಷ ಆಗಬೇಕಿತ್ತು. ಆದರೀಗ, ಈ ವರ್ಷದಿಂದ 23ರಿಂದ 21ಕ್ಕೆ ವಯೋಮಿತಿ ರಾಜಸ್ಥಾನ ಹೈಕೋರ್ಟ್​​ ಇಳಿಸಿದೆ ಎಂದರು ಸಿಂಗ್​​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top