fbpx
ಸಮಾಚಾರ

ನವೆಂಬರ್ 23: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ನವೆಂಬರ್ 23 2019
ಸೂರ್ಯೋದಯ : 6:21 am
ಸೂರ್ಯಾಸ್ತ: 5:50 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಕಾರ್ತೀಕ
ಪಕ್ಷ :ಕೃಷ್ಣಪಕ್ಷ
ತಿಥಿ :ದ್ವಾದಶೀ 27:43
ನಕ್ಷತ್ರ:ಹಸ್ತ 14:45
ಯೋಗ: ಪ್ರೀತಿ 09:39
ಕರಣ: ಕುಲವ 17:03 ತೈತುಲ 27:43

ಅಭಿಜಿತ್ ಮುಹುರ್ತ: 11:43 am – 12:28 pm
ಅಮೃತಕಾಲ : 9:14 am – 10:42 am

ರಾಹುಕಾಲ- 9:15 am – 10:40 am
ಯಮಗಂಡ ಕಾಲ- 1:31 pm – 2:56 pm
ಗುಳಿಕ ಕಾಲ- 6:25 am – 7:50 am

 

ಸಂಕಷ್ಟಗಳನ್ನು ಎದುರಿಸುವ ಕಲೆಗಾರಿಕೆ ನಿಮಗೆ ಹೇಳಿಕೊಡಬೇಕಾಗಿಲ್ಲ. ಎಲ್ಲವನ್ನು ನಗುನಗುತ್ತಲೇ ನಿಭಾಯಿಸುವ ಗುಣ ಅನುಕರಣಿಯವಾದುದು. ಆದರೆ ನಿಮ್ಮ ಮನೆ ಮಂದಿಯೇ ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು.

ಧೂರ್ತರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದಲೇ ಎದುರಿಸಬೇಕು. ಕೆಲಸ ಮಾಡುವ ಕಚೇರಿಯಲ್ಲಿ ವಿನಾಕಾರಣ ನಿಮಗೆ ಕಿರುಕುಳ ಎದುರಾಗುವುದು. ಅದಕ್ಕೆ ಅಂಜದೆ ಅವರದೇ ರೀತಿಯಲ್ಲಿ ಉತ್ತರ ನೀಡಿ..

ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ವಿದೇಶದಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಕೈಗೂಡುವುದು.

ಹೇಳಿದ್ದನ್ನೆ ಮತ್ತೆ ಮತ್ತೆ ಹೇಳಿ ತಲೆ ತಿನ್ನುವ ಜನರು ನಿಮ್ಮನ್ನು ಭೇಟಿ ಆಗುವರು. ಹಾಗಾಗಿ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಎನಿಸುವುದು. ಕೆಲವೊಮ್ಮೆ ಇದು ಅನಿವಾರ್ಯವೂ ಆಗಬಹುದು. ಶಿವನ ಆರಾಧನೆ ಮಾಡಿ.

 

ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರು ಉಳಿತಾಯ ಮಾಡಿ.

 

ಮುನ್ನುಗ್ಗಿ ಹೋಗುವ ನಿಮ್ಮ ಉತ್ಸುಕತೆಯನ್ನು ವೃದ್ಧಿಸಿಕೊಳ್ಳಿ. ಒಳಿತಾಗುವ ಹೊಸದಾದ ಬಾಗಿಲು ತೆರೆಯಲಿದೆ. ಈ ದಿನ ಬರುವ ಉತ್ತಮ ಅವಕಾಶಗಳನ್ನು ನಿರಾಕರಿಸದೆ ಒಪ್ಪಿಕೊಳ್ಳಿ. ಇದರಿಂದ ಒಳಿತಾಗುವುದು.

 

ಯಾವುದೇ ರೀತಿಯ ಮಹತ್ವಾಕಾಂಕ್ಷೆಗಳು ಸೂಕ್ತವಾದ ದಾರಿಯಲ್ಲಿ ಇರಿಸುವ ಹೆಜ್ಜೆಗಳಿಂದ ಮಾತ್ರ ಕೈಗೂಡಲಿದೆ. ಕುಲದೇವತಾ ಅನುಗ್ರಹವನ್ನು ವಿಶೇಷವಾಗಿ ಪಡೆಯಿರಿ. ಆಂಜನೇಯ ಸ್ತೋತ್ರ ಪಠಿಸಿ.

 

ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಅಂತೆಯೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.

 

ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.

ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.

 

ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವಿರಿ. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.

 

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಹುನ್ನಾರದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top