fbpx
ಸಮಾಚಾರ

ಸ್ಯಾಂಡಲ್​ವುಡ್ ಸ್ಟಾರ್ ನಟನೊಂದಿಗೆ ಚಿತ್ರರಂಗಕ್ಕೆ ರಮ್ಯಾ ಕಂಬ್ಯಾಕ್?

ರಾಜಕಾರಣದ ಗುಂಗಿಗೆ ಬಿದ್ದು ಚಿತ್ರ ರಂಗದಿಂದ ಮರೆಯಾಗಿದ್ದ ರಮ್ಯಾರನ್ನ ಅಭಿಮಾನಿಗಳು ಮಿಸ್ ಮಾಡಿಕಳ್ತಲೇ ಇದ್ದಾರೆ. ಆದರೆ ರಮ್ಯಾ ಮತ್ತೆ ಬಣ್ಣಹಚ್ಚಬಹುದೆಂಬ ನಿರೀಕ್ಷೆ ಕೂಡಾ ಇತ್ತಿತ್ತಲಾಗಿ ಮಂಕಾಗಿತ್ತು. ಆದರೆ ಸ್ಯಾಂಡಲ್‌ವುಡ್‌ಗೆ ಮತ್ತೆ ರಮ್ಯಾ ವಾಪಸ್ ಬರ‍್ತಾರಾ ಅಥವಾ ಇಲ್ವಾ ಅನ್ನೋ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಲೇ ಇದೆ. ಈ ವಾದ ವಿವಾದಗಳ ನಡುವೆ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ಸಿನಿಮಾದಲ್ಲಿ ನಟಿಸೋದು ಕನ್ಪರ್ಮ್ ಎಂಬ ಸುದ್ದಿಯಿದೆ. ಅದೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅನ್ನೋದೇ ಇಂಟ್‌ರೆಸ್ಟಿಂಗ್ ಸಂಗತಿ.

ಈ ಹಿಂದೆ ದತ್ತಾ ಸಿನಿಮಾದಲ್ಲಿ ದರ್ಶನ್ ಮತ್ತು ರಮ್ಯಾ ಒಂದಾಗಿ ಅಭಿನಯಿಸಿದ್ರು. ಈ ಸಿನಿಮಾ ಕೂಡ ಒಂದು ಮಟ್ಟಿಗೆ ಸಕ್ಸಸ್ ಕಂಡಿತ್ತು. ಆನಂತರ ಇವರಿಬ್ಬರು ಜೊತೆಯಾಗಿ ನಟಿಸಲೇ ಇಲ್ಲ. ಆದರೆ, ಇವರನ್ನ ತೆರೆಮೇಲೆ ನೋಡ್ಬೇಕು ಅನ್ನೋ ಅಭಿಮಾನಿಗಳ ಆಸೆ ಕಡಿಮೆಯಾಗಿಲ್ಲ. ಇದೀಗ ದರ್ಶನ್ ಮತ್ತು ರಮ್ಯಾ 12 ವರ್ಷಗಳ ನಂತರ ಮತ್ತೆ ಒಂದಾಗಿ ನಟಿಸ್ತಾರೆ ಅನ್ನೋ ಸುದ್ದಿ ನಿಧಾನವಾಗಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾಗೆ ನಾಯಕಿಯಾಗಿ ರಮ್ಯಾ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಸದ್ಯ ರಮ್ಯಾ ರಾಜಕೀಯದಿಂದ ದೂರವಾಗಿದ್ದು ಮತ್ತೆ ಸಿನಿ ರಂಗದತ್ತ ಒಲವು ತೋರಿದ್ದಾರೆ ಎನ್ನಲಾಗಿದ್ದು ಗಂಡುಗಲಿ ಮದಕರಿನಾಯಕ ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.

ಇನ್ನು ಸಿನಿಮಾ ಮುಹೂರ್ತಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಇದೇ ಡಿಸೆಂಬರ್ 02ರಂದು ಚಿತ್ರ ಸೆಟ್ಟೇರಲಿದೆ. ಅದ್ದೂರಿ ಮುಹೂರ್ತದ ಮೂಲಕ ಚಿತ್ರಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಬೃಹತ್​ ಸೆಟ್ಟುಗಳ ನಿರ್ಮಾಣದ ಜೊತೆಗೆ ತಜ್ಞ ಕಲಾವಿದರ ನೀಲಿ ನಕ್ಷೆ ಸಿದ್ದಪಡಿಸಿದ್ದು ಚಿತ್ರದುರ್ಗ, ರಾಜಸ್ಥಾನ, ಮುಂಬೈ ಹಾಗೂ ಉತ್ತರ ಭಾರತದ ನಗರಗಳಲ್ಲಿ, ಚಿತ್ರದ ಶೂಟಿಂಗ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದು ಅಶೋಕ್ ಕಶ್ಯಪ್ ಅವರು ಕ್ಯಾಮರಾ ಹಿಡಿಯಲಿದ್ದಾರೆ.

‘ಗಂಡುಗಲಿ ಮದಕರಿ ನಾಯಕ’ ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಸಂಭಾಷಣೆ ಬರೆಯುತ್ತಿದ್ದಾರೆ ಬಿ ಎಲ್ ವೇಣು.. . ಇದೇ ಮೊದಲ ಬಾರಿಗೆ ದರ್ಶನ್, ರಾಜೇಂದ್ರಸಿಂಗ್ ಬಾಬು ಮತ್ತು ರಾಕ್ಲೈನ್ ವೆಂಕಟೇಶ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top