fbpx
ಸಮಾಚಾರ

ರಾನು ಮೊಂಡಲ್ ಮೇಕಪ್ ಫೋಟೋ ಫೇಕ್: ಬೇಸರ ವ್ಯಕ್ತಪಡಿಸಿದ ಮೇಕಪ್ ಆರ್ಟಿಸ್ಟ್!

ಇತ್ತೀಚೆಗೆ ರಾನು ಮೊಂಡಲ್ ಅವರ ಮೇಕಪ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾನು ಮುಖಕ್ಕೆ ಅತಿಯಾಗಿ ಮೇಕಪ್ ಮಾಡಿರುವ ಫೋಟೋವನ್ನು ನೋಡಿ ನೆಟ್ಟಿಗರು ಮನಬಂದಂತೆ ಟ್ರೋಲ್ ಮಾಡಿದ್ದರು. ರೈಲು ನಿಲ್ದಾಣದಲ್ಲಿ ಹಾಡು ಹಾಡುವವರಿಗೆಲ್ಲಾ ಈ ರೀತಿ ಮಣೆ ಹಾಕಿದರೆ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು ಕೆಲವರು ಹೀಯಾಳಿಸಿ ಮಾತನಾಡುತ್ತಾ ರಾನು ಮೊಂಡಲ್‌ರ ತೇಜೋವಧೆ ಮಾಡಿದ್ದರು.

 

 

ಸದ್ಯ ಈ ಫೋಟೋ ಫೇಕ್ ಎಂದು ಮೇಕಪ್ ಆರ್ಟಿಸ್ಟ್ ನಿಜವಾದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾನು ಅವರ ಫೇಕ್ ಮೇಕಪ್ ಫೋಟೋ ವೈರಲ್ ಆಗಿ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಇದನ್ನು ನೋಡಿದ ಮೇಕಪ್ ಆರ್ಟಿಸ್ಟ್ ಸಂಧ್ಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ತಮ್ಮ ಇನ್‍ಸ್ಟಾನಲ್ಲಿ ತಾವು ಮಾಡಿದ ಮೇಕಪ್ ಫೋಟೋ ಹಾಗೂ ನಕಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಂಧ್ಯಾ ತಮ್ಮ ಇನ್‍ಸ್ಟಾದಲ್ಲಿ, “ಈ ಫೋಟೋದಲ್ಲಿ ನೀವು ನಾವು ಮಾಡಿದ ಕೆಲಸ ಹಾಗೂ ಎಡಿಟ್ ಮಾಡಿರುವ ಫೋಟೋವಿನ ವ್ಯತ್ಯಾಸ ವನ್ನು ನೋಡಬಹುದು. ತಮಾಷೆ ಹಾಗೂ ಟ್ರೋಲ್ ಮಾಡುವುದು ಸಹಜ. ಅದು ಎಲ್ಲರನ್ನು ಖುಷಿಪಡಿಸುತ್ತದೆ. ಆದರೆ ಅದು ಬೇರೆಯವರ ಭಾವನೆಗಳಿಗೆ ನೋವಾಗುತ್ತದೆ. ಈ ರೀತಿ ಮಾಡುವುದು ಸರಿಯಲ್ಲ. ನೀವೆಲ್ಲರೂ ಸತ್ಯವನ್ನು ಅರ್ಥ ಮಾಡಿಕೊಳ್ಳುವಿರಿ. ಅಲ್ಲದೆ ನಕಲಿ ಹಾಗೂ ನಿಜವನ್ನು ನೀವು ಅರಿತುಕೊಳ್ಳುವಿರಿ ಎಂದು ನಾವು ಭಾವಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.

“ಇನ್ನೂ ಕೆಲವರು ತುಂಬಾ ನಗಾಡಿದ್ದಾರೆ. ಇದೆಲ್ಲಾ ಓಕೆ. ಆದರೆ ನಿಮ್ಮ ನಡೆ, ಕಾಮೆಂಟ್‌ಗಳು ಬೇರೆಯವರ ಮನೋಭಾವಗಳನ್ನು ಘಾಸಿಗೊಳಿಸುತ್ತವೆ ಕೂಡ. ಹಾಗಾಗಿ ಅಸಲಿಗೂ, ನಕಲಿಗೂ ವ್ಯತ್ಯಾಸ ತಿಳಿದುಕೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ” ಎಂದು ಹೇಳಿ ಎರಡೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top