fbpx
ಸಮಾಚಾರ

“ಶಿವಣ್ಣ ಲಾಂಗ್ ಹಿಡಿದರೆ ನಾನು ಅವರ ಹಿಂದೆ ನಿಲ್ಲುತ್ತೇನೆ” ದರ್ಶನ್ ಹೀಗೆ ಹೇಳಿದ್ದು ಏಕೆ?

ಮಲ್ಟಿ ಸ್ಟಾರ್ ಸಿನಿಮಾಗಳು ಹೆಚ್ಚುಹೆಚ್ಚು ಬರಲಿ, ನೆಚ್ಚಿನ ಸ್ಟಾರ್ ನಟರೆಲ್ಲಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿ ಎಂದು ಎಲ್ಲರ ಅಭಿಮಾನಿಗಳು ಒತ್ತಾಸೆ. ಆದರೆ ಅಂಥಾದ್ದೊಂದು ನಿರೀಕ್ಷೆ ಇದ್ದರೂ ಆದರೆ ಕೆಲವು ಸ್ಟಾರ್ ನಟರ ಕಾಂಬಿನೇಷನ್ ಚಿತ್ರಗಳನ್ನು ತೆರೆ ಮೇಲೆ ತರುವ ಸಾಹಸಕ್ಕೆ ಯಾರು ಕೈಹಾಕಿಲ್ಲ ಉದಾ: ಸುದೀಪ್-ದರ್ಶನ್, ದರ್ಶನ್-ಶಿವಣ್ಣ, ಪುನೀತ್-ಸುದೀಪ್, ದರ್ಶನ್- ಪುನೀತ್ ಇತ್ಯಾದಿ..

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ವರ್ಷಗಳಿಂದ ಕೇಳಿ ಬರುತ್ತಿದೆ. ಆಗಾಗ ಈ ಬಗ್ಗೆ ಸುದ್ದಿಯಾಗುತ್ತಿರುತ್ತದೆ. ಇದೀಗ ಈ ವಿಚಾರ ಕೂಡ ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಇಂದು ನಟರಾದ ದರ್ಶನ್ ಮತ್ತು ಶಿವಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದರು. ಡಾ.ರಾಜ್ ಕುಮಾರ್ ಸಂಬಂಧಿ ಧ್ರುವನ್ ಅವರ ಚಿತ್ರದ ಮುಹೂರ್ತ ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿಇವರಿಬ್ಬರೂ ಭಾಗಿಯಾಗಿದ್ದು ವಿಶೇಷವಾಗಿತ್ತು. ಹಾಗೆಯೇ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಿವಣ್ಣ ಅವರ ಸಂಬಂಧಿ ಧ್ರುವನ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದು ಚಿತ್ರದ ಮುಹೂರ್ತಕ್ಕೆ ಈ ಇಬ್ಬರು ದಿಗ್ಗಜ ನಟರು ಬಂದಿದ್ದರು. ಈ ವೇಳೆ ಮಾಧ್ಯಮಗಳು ಶಿವಣ್ಣ ಅವರನ್ನು ದರ್ಶನ್ ಜೊತೆ ನೀವು ಸಿನಿಮಾ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇವೆ ಎಂದರು.

ಇದೆ ವೇಳೆ ಮಾತನಾಡಿದ ದರ್ಶನ್ ಅವರು “ನಮ್ಮಿಬ್ಬರನ್ನು ಒಟ್ಟಿಗೆ ನಿಭಾಯಿಸೋ ನಿರ್ದೇಶಕರು ಸದ್ಯ ಯಾರು ಇಲ್ಲಾ , ಸಿಕ್ಕಾಗ ಸಿನಿಮಾ ಮಾಡೋದು ಪಕ್ಕಾ” ಅಂತಾ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದನ್ನ ನೀಡಿದರು., . “ಲಾಂಗ್ ಹಿಡಿಯುವ ಸನ್ನಿವೇಶ ಬಂದರೆ ಶಿವಣ್ಣ ಸೀನಿಯರ್ ಅವರೇ ಹಿಡಿಯುತ್ತಾರೆ ನಾನು ಪಕ್ಕದಲ್ಲಿ ಇರ್ತೀನಿ” ಎಂದು ದರ್ಶನ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top