fbpx
ಸಮಾಚಾರ

ಶಾಸಗಿ ಅಂಜಲಿ ನಿಂಬಾಳ್ಕರ್ IMAನಿಂದ ತೆಗೆದುಕೊಂಡ ಒಡವೆಗಳ ಒಟ್ಟು ಬೆಲೆ ಎಷ್ಟು?

‘ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮದ್‌ ಮನ್ಸೂರ್ ಖಾನ್‌ ವಿದೇಶಕ್ಕೆ ಪರಾರಿಯಾಗಲು ಸಿಐಡಿ ಐಜಿಪಿ ಆಗಿದ್ದ ಹೇಮಂತ್‌ ನಿಂಬಾಳ್ಕರ್‌ ಸಹಕರಿಸಿದ್ದರು ಎಂಬ ಆರೋಪವು ಅವರ ವಿರುದ್ಧ ಕೇಳಿಬಂದಿತ್ತು. ಹೇಮತ್ ನಿಂಬಾಳ್ಕರ್ ಅವರ ಪತ್ನಿ ಖಾನಾಪುರ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ಅವರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬಂದಿತ್ತು..

ಇದೀಗ ಹೇಮತ್ ನಿಂಬಾಳ್ಕರ್ ಮತ್ತು ಶಾಸಕಿ ಅಂಜಲಿ ನಿಂಬಾಳ್ಕರ್‌ ವಿರುದ್ಧ ಪತ್ರಕರ್ತ ಅಗ್ನಿ ಶ್ರೀಧರ್ ಮತ್ತೊಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿರುವ ಅಗ್ನಿ ಶ್ರೀಧರ್ ನಿಂಬಾಳ್ಕರ್ ದಂಪತಿಗಳ ವಿರುದ್ಧ ಕೆಲವು ಆರೋಪಿಗಳನ್ನು ಮಾಡಿದ್ದಾರೆ.

ಅಗ್ನಿ ಶ್ರೀಧರ್ ಅವರ ಆರೋಪ ಏನು?
“ಐಎಂಎ ಪ್ರಕರಣದಲ್ಲಿ ಮೊಹಮದ್‌ ಮನ್ಸೂರ್ ಖಾನ್‌ ಗೆ ಸಹಾಯ ಮಾಡಲು ಹೇಮಂತ್‌ ನಿಂಬಾಳ್ಕರ್‌ ಬರೋಬ್ಬರಿ ಐದು ಕೋಟಿ ರೂಗಳಿಗೆ ಡೀಲ್ ಮಾಡಿಕೊಂಡು ಐದು ಕೋಟಿ ಹಣವನ್ನು ಪಡೆದುಕೊಳ್ಳುತ್ತಾರೆ.. ಅಷ್ಟೇ ಅಲ್ಲದೆ ತಮ್ಮ ಪತ್ನಿ ಅಂಜಲಿ ನಿಂಬಾಳ್ಕರ್ ಅವರನ್ನು ಮನ್ಸೂರ್ ನ ಚಿನ್ನದ ಅಂಗಡಿಗೆ ಕಳುಹಿಸಿ ಬೇಕಾದ ಆಭರಣಗಳನ್ನು ತೆಗೆದುಕೊಂಡು ಬರುವಂತೆ ಹೇಳುತ್ತಾರೆ. ಅಂಗಡಿಗೆ ಹೋದ ಅಂಜಲಿ ನಿಂಬಾಳ್ಕರ್ ಅಲ್ಲಿನ ಷೋಪೀಸ್ ಗಳ ಮೇಲೆ ಹಾಕಲಾಗಿದ್ದ ಉದ್ದನೆಯ ಕಂಠೀಹಾರಗಳನ್ನು ಬೇಕು ಎಂದು ಹೇಳಿ ಕನಿಷ್ಠ ಎಂದರೂ ನಾಲ್ಕೈದು ಕೋಟಿಯ ಒಡವೆಗಳನ್ನು ಅಂಜಲಿ ತೆಗೆದುಕೊಂಡು ಹೋಗಿದ್ದಾರೆ” ಎಂದು ಅಗ್ನಿ ಶ್ರೀಧರ್ ಅವರು ತಮ್ಮ ವಿಡಿಯೋ ದಲ್ಲಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top