fbpx
ಸಮಾಚಾರ

ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ಪ್ರಧಾನ!

ಖ್ಯಾತ ಸಾಹಸ ನಿರ್ದೇಶಕ, ನಟ ಮತ್ತು ನಿರ್ದೇಶಕ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ‘ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್’ ಯುನಿವರ್ಸಿಟಿಯಿಂದ ಥ್ರಿಲ್ಲರ್ ಮಂಜುಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಜೀವಮಾನ ಸಾಧನೆಗಾಗಿ ಥ್ರಿಲ್ಲರ್ ಮಂಜು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿ ದುಡಿಯುತ್ತಿರುವ ಮಂಜು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸುತ್ತಿರುವ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸ್ನೇಹಿತರು ಮತ್ತು ಅಭಿಮಾನಿಗಳು ಮಂಜುಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಥ್ರಿಲ್ಲರ್ ಮಂಜು ಅವರು 1990ರಲ್ಲಿ ನಟ ಶಂಕರ್ ನಾಗ್ ಅಭಿನಯದ ‘ನರಸಿಂಹ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡುವ ಮೂಲಕ ತಮ್ಮ ಸಿನಿ ಪ್ರಯಣವನ್ನು ಶುರು ಮಾಡಿದ್ದರು. ನಂತರ ಸ್ಯಾಂಡಲ್‍ವುಡ್‍ನ ಬಹುತೇಕ ನಟರಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top