fbpx
ಸಮಾಚಾರ

ಎರಡನೇ ಮಗುವಿಗೆ ತಂದೆಯಾದ ನಟ ಪ್ರಮೋದ್ ಶೆಟ್ಟಿ

ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿಯಾಗಿದ್ದ ‘ಕುಲವಧು’ನಲ್ಲಿ ಕಾಂಚನಾ ಎಂಬ ವಿಲನ್ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಸುಪ್ರಿತಾ ಶೆಟ್ಟಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ನವೆಂಬರ್ 20 ರಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರೀತಾ ಶೆಟ್ಟಿಗೆ ಹೆರಿಗೆ ಆಗಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಗಂಡು ಮಗುವಿನ ಆಗಮನದಿಂದ ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿ ಖುಷಿಯಾಗಿದ್ದಾರೆ. ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿಗೆ ಇದು ಎರಡನೇ ಮಗು. ಈಗಾಗಲೇ ಈ ದಂಪತಿಗೆ ಹೆಣ್ಣು ಮಗುವಿದೆ.

ಸುಪ್ರಿತಾ ಅವರ ಪತಿ ಪ್ರಮೋದ್ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹಲವಾರು ಚಿತ್ರಗಳಲ್ಲಿ ನಟಿಸಿರುವ ಪ್ರಮೋದ್‌ ಹೆಚ್ಚು ಹೆಸರು ಮಾಡಿದ್ದು ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ. ಆನಂತರ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

. ಕುಂದಾಪುರದ ಸುಪ್ರೀತಾ ಬೆಳೆದಿದ್ದು ನಗರದಲ್ಲಿ. ಮನೆಯವರ ವಿರೋಧದ ನಡುವೆಯೂ ‘ರಂಗ ಸೌರಭ’ ಎಂಬ ರಂಗತಂಡದಲ್ಲಿ ತೊಡಗಿಸಿಕೊಂಡು ಸುಮಾರು 6 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. 2006ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟ ಇವರು ಇಲ್ಲಿಯವರೆಗೆ 60 ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top