fbpx
ಸಮಾಚಾರ

2ನೇ ಟೆಸ್ಟ್ ನಡೆಯುತ್ತಿರುವಾಗಲೇ ಪಂತ್ ರನ್ನು ಕೈಬಿಟ್ಟ ಭಾರತ ತಂಡ; ಕಾರಣವೇನು ಗೊತ್ತಾ?

ಟೀಂ ಇಂಡಿಯಾ ಯುವ ವಿಕೆಟ್ ಕೀಪರ್- ಬ್ಯಾಟ್ಸ್​ಮನ್​​​ ರಿಷಭ್ ಪಂತ್​ನನ್ನು ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಇವರ ಬದಲು ಬಿಸಿಸಿಐ ಆಂಧ್ರ ಪ್ರದೇಶದ ಕೆಎಲ್. ಭರತ್ ಅವರನ್ನು ಆಯ್ಕೆ ಮಾಡಿದೆ. ಆಡುವ ಹನ್ನೊಂದರ ಒಳಗೆ ಸ್ಥಾನವನ್ನೇ ಪಡೆಯದ ಪಂತ್ ರನ್ನು ಪಂದ್ಯ ನಡೆಯುತ್ತಿರುವಾಗಲೇ ಯಾಕೆ ಕೈಬಿಟ್ಟಿದ್ದಾರೆ ಅಂತೀರಾ? ಮುಂದೆ ಓದಿ.

ರಿಷಬ್ ಪಂತ್‌ ಅವರನ್ನು ಭಾರತದ ಆಯ್ಕೆ ಸಮಿತಿ ಟೀಮ್ ಇಂಡಿಯಾದಿಂದ ಬಿಡುಗಡೆಗೊಳಿಸಿದೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಆಡಲು ಅನುಕೂಲವಾಗುವಂತೆ ಪಂತ್‌ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಎಷ್ಟೇ ಅವಕಾಶ ನೀಡಿದರು ಕಳೆದ ಕೆಲವು ಸರಣಿಗಳಿಂದ ರಿಷಬ್ ಪಂತ್ ಸಂಪೂರ್ಣ ವೈಫಲ್ಯವಾಗಿದ್ದರು. ಅನೇಕರಿಂದ ಟೀಕೆಗೂ ಗುರಿಯಾಗಿದ್ದರು. ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಭಾರತ ನಿಯಮಿತ ಓವರ್‌ಗಳ ಸರಣಿಯನ್ನಾಡಲಿದೆ. ಹೀಗಾಗಿ ಪಂತ್ ಆಟದಲ್ಲಿ ತೊಡಗಿಕೊಂಡಿದ್ದು ಸರಣಿಗೆ ತಯಾರಾಗಲಿ ಎಂಬ ಕಾರನಾಕ್ಕೆ ಪಂತ್ ರನ್ನು ಬಿಡುಗಡೆಗೊಡಿಸಲಾಗಿದೆ.

ಸದ್ಯ ನಡೆಯುತ್ತಿರುವ ಬಾಂಗ್ಲಾ vs ಭಾರತ ದ್ವಿತೀಯ ಟೆಸ್ಟ್‌ನಲ್ಲಿ ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಕವರ್‌ ಆಗಿ ಪಂತ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ ಪಂತ್ ಬದಲು ಬಿಸಿಸಿಐ ಆಂಧ್ರ ಪ್ರದೇಶದ ಕೆಎಲ್. ಭರತ್ ಅವರನ್ನು ಆಯ್ಕೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top