fbpx
ಸಮಾಚಾರ

ಬಿಗ್‌ಬಾಸ್‌ ಮನೆಗೆ 2ನೇ ವೈಲ್ಡ್‌ ಕಾರ್ಡ್‌ ಎಂಟ್ರಿ: ದೊಡ್ಮನೆ ಪ್ರವೇಶಿಸಿದ ಆ ಸ್ಪರ್ಧಿ ಯಾರು?

ಮೊದಲ ವೈಲ್ಡ್​​ ಕಾರ್ಡ್​ ಎಂಟ್ರಿ ಮೂಲಕ ಆರ್​ಜೆ ಪೃಥ್ವಿಯವರು ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟರು… ಆದರೀಗ ಸ್ಯಾಂಡಲ್​ವುಡ್​ ನಟಿಯೊಬ್ಬರು 2ನೇ ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಬಿಗ್​ಬಾಸ್​ ಮನೆಗೆ ಬಂದಿದ್ದಾರೆ… ಯಾರು ಅಂತೀರಾ? ಮುಂದೆ ಓದಿ.

ಈ ಬಾರಿ ಮನೆಗೆ ಹೋಗ್ತಿರೋದು ಸ್ಯಾಂಡಲ್‌ವುಡ್‌ ಹೀರೋಯಿನ್‌ ರಕ್ಷಾ ಸೋಮಶೇಖರ್‌. ಇವರು 2018 ರಲ್ಲಿ ತೆರೆಕಂಡ ‘ಮೇ ಫಸ್ಟ್‘ ಚಿತ್ರದ ಮೂಲಕ ಚಂದನ ವನಕ್ಕೆ ಕಾಲಿಟ್ಟರು.​ ನೀನಾಸಂ ಸತೀಸ್​ ಮತ್ತು ಶ್ರದ್ಧಾ ಶ್ರಿನಾಥ್​ ಅಭಿನಯಿಸಿರುವ ಗೋದ್ರಾ ಸಿನಿಮಾದಲ್ಲೂ ರಕ್ಷಾ ಸೋಮಶೇಖರ್​ ಅಭಿನಯಿಸಿದ್ದಾರೆ. ಇದೀಗ ಬಿಗ್​ ಬಾಸ್​ ಮನೆಗೆ ರಕ್ಷಾ ಶೇಖರ್​ ಅವರ ದಿಢೀರ್​ ಎಂಟ್ರಿಯಿಂದ ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿರೋ ಈ ನಟಿ, ಬಿಗ್‌ಬಾಸ್‌ನ ಲೆಕ್ಕಾಚಾರಗಳನ್ನೆಲ್ಲಾ ಬದಲು ಮಾಡ್ತಾರಾ ಅಥವಾ ಪೃಥ್ವಿಯಂತೆ ಸ್ಪರ್ಧಿಗಳ ಜೊತೆ ಹೊಂದಿಕೊಂಡು ಸೇಫ್ ಗೇಮ್ ಆಡ್ತಾರಾ ಎಂಬುದೇ ಸದ್ಯದ ಕುತೂಹಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top