fbpx
ಸಮಾಚಾರ

ಸುಧಾಮೂರ್ತಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಅಮಿತಾಬ್ ಬಚ್ಚನ್!

ಬಾಲಿವುಡ್ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುವ ಹಿಂದಿ ಅವತರಣಿಕೆಯ ಕೌನ್ ಬನೇಗಾ ಕರೋಡ್​ಪತಿ(ಕೆಬಿಸಿ)ಯಲ್ಲಿ ಈ ಬಾರಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಭಾಗಿಯಾಗಿದ್ದಾರೆ. ಇದೀಗ ಅದರ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 

 

ಪ್ರೋಮೋದಲ್ಲಿ ಅಮಿತಾಬ್ ಬಚ್ಚನ್, ಸುಧಾಮೂರ್ತಿ ಅವರ ಸಾಧನೆ ಮತ್ತು ಸಮಾಜ ಸೇವೆಯನ್ನು ಪ್ರೇಕ್ಷಕರಿಗೆ ವಿವರಿಸಿದ್ದಾರೆ. ಜೊತೆಗೆ ಬಿಗ್ ಬಿ ಅವರ ಕಾಲಿಗೆ ಬಿದ್ದು, ಆಶೀರ್ವಾದ ಪಡೆದಿದ್ದಾರೆ. ಈ ಕಾರ್ಯಕ್ರಮ ನವೆಂಬರ್ 29 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಇದೆ ವೇಳೆ ಸುಧಾಮೂರ್ತಿ, ತಮ್ಮ ಪ್ರತಿಷ್ಠಾನದ ಮೂಲದ ಹೊಸ ಬದುಕು ಕಟ್ಟಿಕೊಂಡಿರುವ ದೇವದಾಸಿಯರು ತಯಾರಿಸಿದ ಕೌದಿಯೊಂದನ್ನು ಅಮಿತಾಬ್ ಅವರಿಗೆ ಉಡುಗೊರೆಯಾಗಿ ಕೊಟ್ಟರು. ಈ ವಿಷಯವನ್ನು ಅಮಿತಾಭ್‌ ಅವರೇ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. “ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸುಧಾಮೂರ್ತಿ ಅವರು ದೇವದಾಸಿಯರಿಗೆ ಹೊಸ ಬದುಕು ಕೊಟ್ಟಿದ್ದಾರೆ. ದೇವದಾಸಿಯರು ತಯಾರಿಸಿರುವ ಈ ಕೌದಿ ಸದಾ ನೆನಪಿನಲ್ಲಿ ಉಳಿಯುವ ಕಾಣಿಕೆಯಾಗಿದೆ” ಎಂದು ಅಮಿತಾಭ್‌ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top