fbpx
ಸಮಾಚಾರ

ವಿಕೆಟ್ ಪಡೆದು ವಿರಾಟ್‍ಗೆ ಸೆಲ್ಯೂಟ್ ಹೊಡೆದ ಬಾಂಗ್ಲಾ ಬೌಲರ್! ವಿಡಿಯೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿಂಕ್ ಬಾಲ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇನ್ನು ವಿಕೆಟ್ ಪಡೆದ ನಂತರ ಬಾಂಗ್ಲಾ ಬೌಲರ್ ಕೊಹ್ಲಿಗೆ ಸೆಲ್ಯೂಟ್ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಇನ್ನಿಂಗ್ಸ್ ನ 80 ಓವರ್‌ನ ಎರಡನೇ ಎಸೆತವನ್ನು ಕೊಹ್ಲಿ ಬೌಂಡರಿಗೆ ಅಟ್ಟಲು ಹೋಗಿ ತೈಜುಲ್ ಇಸ್ಲಾಮ್‍ಗೆ ಕ್ಯಾಚ್ ಒಪ್ಪಿಸಿದರು. ವಿರಾಟ್ ಕೊಹ್ಲಿ 136 ರನ್ ಗಳಿಸಿ ಔಟಾದರು. ವಿರಾಟ್ ವಿಕೆಟ್ ಕಿತ್ತ ಸಂಭ್ರಮದಲ್ಲಿ ಬಾಂಗ್ಲಾ ತಂಡ ಇತ್ತು. ಈ ವೇಳೆ ನಗುತ್ತಲೇ ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ಕೊಹ್ಲಿಗೆ ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೈನ್ ಸೆಲ್ಯೂಟ್ ಹೊಡೆದಿದ್ದಾರೆ.

ಅಂದಹಾಗೆ ಪಂದ್ಯದ ಎರಡನೇ ದಿನ 9 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಕೊಂಡಿದ್ದ ಭಾರತ ತಂಡ 241 ರನ್ ಗಳ ಮುನ್ನಡೆ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 106 ರನ್ ಗಳಿಗೆ ಆಲ್ ಔಟ್ ಆಗಿದ್ದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ ಇನ್ನಿಂಗ್ಸ್ ಹಾಗೂ 46 ರನ್ ಗಳ ಜಯ ಪ್ರಾಪ್ತಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top