fbpx
ಸಮಾಚಾರ

“ಅಯೋಧ್ಯೆ ತೀರ್ಪು ತಡವಾಗಲು ಕಾಂಗ್ರೆಸ್ ಕಾರಣ” ಮೋದಿ ವಾಗ್ದಾಳಿ

ಸುಪ್ರೀಂಕೋರ್ಟ್ ನಲ್ಲಿ ಅಯೋಧ್ಯೆಯ ತೀರ್ಪು ಬರಲು ತಡವಾಗಿದ್ದು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

 

ಜಾರ್ಖಂಡ್ ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಅಯೋಧ್ಯೆಯ ವಿಚಾರದ ಕುರಿತು ಪರಿಹಾರ ಕಂಡುಕೊಳ್ಳುವಲ್ಲಿ ವಿಳಂಬಮಾಡಿತು. ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ವಿಚಾರವನ್ನು ಮಾತನಾಡುವುದನ್ನೇ ನಿಲ್ಲಿಸಿತು. ಅವರು ಪ್ರಯತ್ನ ಪಟ್ಟಿದ್ದರೆ ಅಯೋಧ್ಯೆ ಕುರಿತ ತೀರ್ಪನ್ನು ಮೊದಲೇ ಪಡೆಯಬಹುದಿತ್ತು ಎಂದು ಕಿಡಿಕಾರಿದ್ದಾರೆ.

ಅಯೋದ್ಯೆ ವಿವಾದವನ್ನು ಇತ್ಯರ್ಥ ಮಾಡುವುದು ಕಾಂಗ್ರೆಸ್ ಗೆ ಇಷ್ಟ ಇರಲಿಲ್ಲ. ಮತ ಬ್ಯಾಂಕ್‍ಗಾಗಿ ರಾಮ ಜನ್ಮ ಭೂಮಿಯ ವಿವಾದವನ್ನು ಬಳಸಿಕೊಂಡಿತು. ಕಾಂಗ್ರೆಸ್‍ನ ಇಂತಹ ವಿಚಾರಗಳೇ ದೇಶದ ಮೇಲೆ ಪರಿಣಾಮ ಬೀರಿದವು ಎಂದು ವಾಗ್ದಾಳಿ ನಡೆಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top