fbpx
ಸಮಾಚಾರ

ಸ್ಟಾರ್ ಬೌಲರ್ ಜೋಫ್ರಾ ಆರ್ಚರ್‌ಗೆ ಕಿವೀಸ್ ನಲ್ಲಿ ಜನಾಂಗೀಯ ನಿಂದನೆ!

ನ್ಯೂಜಿಲ್ಯಾಂಡ್ ಗೆ ಪ್ರವಾಸ ಬೆಳೆಸಿರುವ ಇಂಗ್ಲೆಂಡ್ ತಂಡ ಆಟಗಾರ ಜೋಫ್ರಾ ಆರ್ಚರ್ ಗೆ ಜನಾಂಗೀಯ ನಿಂದನೆ ಮಾಡಲಾಗಿದೆ. ಆತಿಥೇಯ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಂದು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಇಂಗ್ಲೆಂಡ್‌ನ ಸ್ಟಾರ್‌ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

 

 

“ಜನಾಂಗೀಯ ನಿಂದನೆ ಬಹಳ ಬೇಸರ ತರುತ್ತದೆ. ಅದರಲ್ಲೂ ತಂಡವನ್ನು ಉಳಿಸುವ ಸಲುವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಈ ರೀತಿಯ ನಿಂದನೆ ಸಹಿಸಲಾಗದು. ಅಂದಹಾಗೆ ಪ್ರೇಕ್ಷಕರ ಬೆಂಬಲ ಅದ್ಭುತವಾಗಿತ್ತು. ಆದರೆ ಆ ಒಬ್ಬ ವ್ಯಕ್ತಿಯನ್ನು ಬಿಟ್ಟು. ಬಾರ್ಮಿ ಆರ್ಮಿ ಬೆಂಬಲೂ ಎಂದಿನಂತೆ ಅತ್ಯುತ್ತಮವಾಗಿತ್ತು,” ಎಂದು ಆರ್ಚರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ 2 ಟೆಸ್ಟ್‌ಗಳ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯದ ಐದನೇ ದಿನವಾದ ಸೋಮವಾರ (ನ.25) ಇಂಗ್ಲೆಂಡ್‌ ತಂಡ ಕಿವೀಸ್‌ ವಿರುದ್ಧ ಇನಿಂಗ್ಸ್‌ ಮತ್ತು 65 ರನ್‌ಗಳ ಹೀನಾಯ ಸೋಲುಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top