fbpx
ಸಮಾಚಾರ

ಧ್ರುವ ಮದುವೆ ದಿನವೇ ‘ಪೊಗರು‘ ರಿಲೀಸ್ ಡೇಟ್ ಅನೌನ್ಸ್!

ಧ್ರುವ ಸರ್ಜಾ ಅವರು ಪೊಗರು ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಎಲ್ಲಾರಿಗೂ ಗೊತ್ತಿದೆ. ಕಳೆದ ಅಕ್ಟೋಬರ್​ ನಲ್ಲಿ ಪೊಗರು ಚಿತ್ರದ ಡೈಲಾಗ್​ ಟ್ರೈಲರ್​ ಬಿಡುಗಡೆ ಮಾಡಿದ್ದರು. ಇದೀಗ ಪೊಗರು ನಿರ್ದೇಶಕ ನಂದ ಕಿಶೋರ್​ ಚಿತ್ರದ ಬಿಡುಗಡೆ ದಿನಾಂಕವನ್ನು ದ್ರುವ ಮಾಡುವೆ ದಿನದಂದೇ ಅನೌನ್ಸ್​ ಮಾಡಿದ್ದಾರೆ.

ಪೊಗರು’ ಸಿನಿಮಾವನ್ನು ಸಂಕ್ರಾಂತಿ ಹಬ್ಬದ ವಿಶೇಷವಾಗಿ 2020ರಲ್ಲಿ ಬಿಡುಗಡೆ ಆಗಲಿದೆ. ಈ ವಿಷಯವನ್ನು ನಿರ್ದೇಶಕ ನಂದ ಕಿಶೋರ್ ತಿಳಿಸಿದ್ದಾರೆ. ಧ್ರುವ ಸರ್ಜಾ ಮದುವೆ ವಿಶೇಷವಾಗಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ.

“ಇನ್ನು ಮುಂದಿನ ವಾರದಂದು ಸಿನಿಮಾದ ಸಾಂಗ್​ ಶೂಟಿಂಗ್​ ಶುರುವಾಗಲಿದ್ದು, 3 ಹಾಡುಗಳ ಚಿತ್ರೀಕರಣ ಬಾಕಿ ಇದೆ. ಡಿಸೆಂಬರ್​ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದು, ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ (ಜ.14) ಸಿನಿಮಾ ರಿಲೀಸ್​ ಮಾಡುವುದು” ಎಂದು ನಂದ ಕಿಶೋರ್ ಹೇಳಿದ್ದಾರೆ.

ಅಂದಹಾಗೆ ‘ಪೊಗರು’ ಚಿತ್ರಕ್ಕೆ ಬಿ.ಕೆ.ಗಂಗಾಧರ್ ಎಂಬುವವರು ಬಂಡವಾಳ ಹೂಡಿದ್ದು ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿದ್ಯಾ.S ಅವರು ಛಾಯಾಗ್ರಹಣವನ್ನು ಮಾಡಿದ್ದಾರೆ. ಉಳಿದಂತೆ ದ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top