fbpx
ಸಮಾಚಾರ

12ನೇ ವಯಸ್ಸಿಗೆ ಟೆಕ್ಕಿ – 7ನೇ ತರಗತಿಯ ಈ ಹುಡುಗ ಈಗ ಡೇಟಾ ವಿಜ್ಞಾನಿ

7ನೇ ತರಗತಿ ವಿದ್ಯಾರ್ಥಿ, 12 ವರ್ಷದ ಪೋರನನ್ನು ಹೈದರಾಬಾದ್ ನ ಸಾಫ್ಟ್ ವೇರ್ ಕಂಪೆನಿಯೊಂದು ಡೇಟಾ ಸೆಂಟಿಸ್ಟ್ ಆಗಿ ನೇಮಕ ಮಾಡಿದೆ. ಸದ್ಯ ಈ ಪುಟ್ಟ ಬಾಲಕ ಎ್ಲಲೆಡೆ ಸದ್ದು ಮಾಡುತ್ತಿದ್ದಾನೆ.

ಹೈದರಾಬಾದಿನ ಶ್ರೀ ಚೈತನ್ಯ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ (12) ಮಾಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕವಾಗಿದ್ದಾನೆ.

‘ನನಗೀಗ 12 ವರ್ಷ ಹಾಗೂ ಮಾಂಟೆಗ್ನೆ ಸ್ಮಾರ್ಟ್ ಸಾಫ್ಟ್ ವೇರ್ ಕಂಪೆನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ನಲ್ಲಿ ಕಲಿಯುತ್ತಿದ್ದೇನೆ. ಈ ಸಾಫ್ಟ್ ವೇರ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಲು ತನ್ಮತಯ್ ಬಕ್ಷೀ ನನಗೆ ಬಹುದೊಡ್ಡ ಪ್ರೇರಣೆ. ಅವರು ಚಿಕ್ಕ ವಯಸ್ಸಲ್ಲೇ ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಜಗತ್ತಿಗೆ ಆರ್ಟಿಫಿಶಲ್ ಇಂಟೆಲಿಜನ್ಸ್ ಕ್ರಾಂತಿ ಅದೆಷ್ಟು ಸುಂದರ ಎಂದು ಸಾರಲು ಯತ್ನಿಸಿದ್ದರು’ ಎಂದು ಈ ಬಾಲಕ ಹೇಳಿದ್ದಾನೆ.

ನನಗೆ ಚಿಕ್ಕ ವಯಸ್ಸಿನಿಂದಲೂ ಈ ಕೆಲಸ ಪಡೆಯಲು ನನ್ನ ತಂದೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ ನನಗೆ ಕೋಡಿಂಗ್ ಮಾಡಲು ಹೇಳಿಕೊಡುತ್ತಿದ್ದರು. ಅವರು ನನಗೆ ವಿಭಿನ್ನ ಜೀವನಚರಿತ್ರೆಗಳನ್ನು ತೋರಿಸಿ ಕೋಡಿಂಗ್ ಮಾಡುವುದನ್ನು ಹೇಳಿಕೊಡುತ್ತಿದ್ದರು. ಇವತ್ತು ನಾನು ಏನಾದೂ ಮಾಡಿದ್ದರೆ ಅದಕ್ಕೆ ನನ್ನ ತಂದೆಯೇ ಕಾರಣ. ಅವರಿಗೆ ಧನ್ಯವಾದಗಳು ಎಂದು ಸಿದ್ಧಾರ್ಥ್ ಹೇಳಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top