fbpx
ಸಮಾಚಾರ

ಬಿಗ್ ಬಾಸ್ ಮನೆಗೆ ರೀ-ಎಂಟ್ರಿ ಕೊಟ್ಟ ಚೈತ್ರಾ ಕೋಟೂರು!

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ಚೈತ್ರಾ ಕೋಟೂರು ದೊಡ್ಮನೆಗೆ ಮತ್ತೆ ರೀ-ಎಂಟ್ರಿ ಕೊಟ್ಟಿದ್ದು ಮನೆಮಂದಿಯೆಲ್ಲಾ ಶಾಕ್ ಆಗಿದ್ದಾರೆ. ಚೈತ್ರಾ ಮನೆಯೊಳಗೆ ಬಂದ ನಂತರ ನಾನು ಮೊದಲೇ ಹೇಳಿದೆ. ಇಲ್ಲಿ ಯಾವುದು ಶಾಶ್ವತ ಅಲ್ಲ. ಟೈಂ ಬಂದಾಗ ಎಲ್ಲರೂ ಹೋಗಬೇಕು. ಮತ್ತೆ ಟೈಂ ಬಂದಾಗ ಬರಬೇಕು ಎಂದು ಹೇಳಿದ್ದಾರೆ. ಸದ್ಯ ಚೈತ್ರಾ ಮನೆಗೆ ಮತ್ತೆ ಎಂಟ್ರಿ ಕೊಟ್ಟಿರುವುದರಿಂದ ಮನೆಯ ಕೆಲವು ಸದಸ್ಯರು ಶಾಕ್‍ನಲ್ಲಿದ್ದು, ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

ಚೈತ್ರಾ ಕೊಟೂರ್‌ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ರಂಪ ರಾಮಾಯಣ ಮಾಡಿದ್ದೆ ಹೆಚ್ಚು. ಆದರೆ ಚೈತ್ರ ಇತರರಿಗೆ ಹೋಲಿಸಿದರೆ ಬುದ್ಧಿವಂತೆ ಕೂಡ. ಕೆಲವೊಂದು ತಪ್ಪುಗಳಿಂದ ಮನೆಯಿಂದ ಹೊರಬಂದ ಚೈತ್ರಾಗೆ ಈಗ ಮತ್ತೆ ಮನೆ ಪ್ರವೇಶಿಸೋ ಅವಕಾಶ ಸಿಕ್ಕಿದೆ. ಚೈತ್ರಾ ಕೊಟೂರ್ ಎಂಟ್ರಿಯಿಂದ ಮನೆಯ ಲೆಕ್ಕಾಚಾರಗಳು ಮತ್ತಷ್ಟು ಬದಲಾವಣೆಯಾಗಲಿವೆ.

ಇಂದು ಅಥವಾ ನಾಳೆ ಚೈತ್ರ ದೊಡ್ಮನೆಯೊಳಕ್ಕೆ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಯಾರು ಅಸಲಿ? ಯಾರು ನಕಲಿ ಎಂಬ ವಿಚಾರ ಚೈತ್ರಾ ಅವರಿಗೆ ಗೊತ್ತಾಗಿದೆ. ಮತ್ತೆ ಮನೆಯೊಳಕ್ಕೆ ಚೈತ್ರಾ ರಿ-ಎಂಟ್ರಿ ಕೊಟ್ಟಿರುವುದು ಸ್ಪರ್ಧಿಗಳ ನಕಲಿ ಮುಖವನ್ನು ಬಿಚ್ಚಿಡುವುದಂತೂ ಸತ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top