fbpx
ಸಮಾಚಾರ

ಕೇವಲ 30 ಸೆಕೆಂಡ್‍ನಲ್ಲಿ ನೆಲಕ್ಕುರುಳ್ಕಿದ 108 ಮೀ. ಎತ್ತರದ ಕಟ್ಟಡ– ವಿಡಿಯೋ ನೋಡಿ.

ದಕ್ಷಿಣ ಆಫ್ರಿಕಾದ ಜೋಹಾನ್ಸ್​​ಬರ್ಗ್​​ನಲ್ಲಿರೋ ಬ್ಯಾಂಕ್​ ಆಫ್​ ಲಿಸ್ಬನ್​ ಕಟ್ಟಡವನ್ನ ನೆಲಸಮ ಮಾಡಲಾಗಿದೆ. ಕಳೆದ ಸೆಪ್ಟೆಂಬರ್​​ನಲ್ಲಿ ಈ ಕಟ್ಟಡ ಬೆಂಕಿ ಅವಘಡಕ್ಕೆ ಸಿಲುಕಿತ್ತು. ಈ ವೇಳೆ ಮೂವರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದರು. ಬಳಿಕ ಕಟ್ಟಡದ ಪರಿಶೀಲನೆ ನಡೆಸಿದಾಗ, ಇದು ಸುರಕ್ಷಿತವಾಗಿಲ್ಲ ಎಂದು ಗೊತ್ತಾಗಿತ್ತು. ಹೀಗಾಗಿ ಗೌಟೆಂಗ್​​ ಪ್ರಾವಿನ್ಷಿಯಲ್ ಸರ್ಕಾರ ಕಟ್ಟಡವನ್ನು ಸ್ಫೋಟಿಸಲು ನಿರ್ಧರಿಸಿತ್ತು.

 

 

ಭಾನುವಾರ ಬೆಳಗ್ಗೆ ಕೇವಲ 30 ಸೆಕೆಂಡ್‍ಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಟ್ಟಡವನ್ನು ಸ್ಫೋಟಕಗಳನ್ನು ಬಳಸಿ ನೆಲಸಮ ಮಾಡಲಾಗಿದೆ. ನೆಲಸಮ ಮಾಡಿದ ಕಟ್ಟಡಗಳ ಪೈಕಿ ಇದು ವಿಶ್ವದಲ್ಲೇ ಎರಡನೇ ಅತ್ಯಂತ ದೊಡ್ಡ ಕಟ್ಟಡವಾಗಿದೆ ಎಂದು ವರದಿಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಇದರ ಎತ್ತರ 108 ಮೀಟರ್ ಆಗಿದ್ದು, ಈ ಹಿಂದೆ 114 ಮೀಟರ್ ಎತ್ತರದ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಇದೇ ವಿಶ್ವದಲ್ಲಿ ಅತ್ಯಂತ ಹೆಚ್ಚು ಎತ್ತರದ ನೆಲಸಮಗೊಂಡ ಕಟ್ಟಡವಾಗಿದೆ ಎಂದು ಗೌಟೆಂಗ್‍ನ ಮೂಲ ಸೌಲಭ್ಯ ಮತ್ತು ಆಸ್ತಿ ಅಭಿವೃದ್ಧಿ ಮಂಡಳಿ ಸದಸ್ಯೆ ತಸ್ನೀಮ್ ಮೊತರಾ ಮಾಹಿತಿ ನೀಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top