fbpx
ಸಮಾಚಾರ

ಕೆಆರ್‌ಪೇಟೆ ಉಪಚುನಾವಣೆ- ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಬಿಜೆಪಿಗೆ ಶಾಕ್

ಕೆ.ಆರ್​​ ಪೇಟೆ ಉಪಚುನಾಣೆಗೆ ಸಂಸದೆ ಸುಮಲತಾ ಅಂಬರೀಶರನ್ನು ಕರೆಸಿಕೊಂಡು ಅಬ್ಬರದ ಪ್ರಚಾರ ಮಾಡಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭಾರೀ ಸರ್ಕಸ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಸುಮಲತಾ ಪ್ರಚಾರಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಎರಡೂ ಬಣದವರ ನಿರೀಕ್ಷೆ ಹುಸಿಯಾಗಿದೆ.

ನನಗೆ ನೀವೂ ಬೇಕು, ಅವರೂ ಬೇಕು. ಹೀಗಾಗಿ ನಾನು ಯಾರ ಪರವೂ ಪ್ರಚಾರಕ್ಕೆ ಬರಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಒಳ್ಳೆಯವರನ್ನು ಜನ ಆಯ್ಕೆ ಮಾಡುತ್ತಾರೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಎರಡು ಬಣದವರಿಗೂ ಸ್ಪಷ್ಟವಾಗಿ ಸಂಸದೆ ತಿಳಿಸಿದ್ದಾರೆ. ಯಾವ ಕಾರಣಕ್ಕೂ ಯಾರ ಪರವಾಗಿಯೂ ಪ್ರಚಾರಕ್ಕೆ ಬರಲ್ಲ ಎಂದಿದ್ದಾರೆ. ಈ ಮೂಲಕ ಸಂಸದೆ ಸುಮಲತಾರನ್ನು ಕರೆತಂದು ತಮ್ಮ ಪರವಾಗಿ ಪ್ರಚಾರ ಮಾಡಿಸಿ ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ಕೆ.ಆರ್ ಪೇಟೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈಗ ನಿರಾಸೆ ಅನುಭವಿಸುವಂತಾಗಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top