fbpx
ಸಮಾಚಾರ

ಕರ್ನಾಟಕದ ಜ್ವಲಂತ ಸಮಸ್ಯೆ ಬಗ್ಗೆ ಕನ್ನಡಿಗರ ಪರ ಕನ್ನಡದಲ್ಲೇ ದೆಹಲಿಯಲ್ಲಿ ಧ್ವನಿಯೆತ್ತಿದ ಸಂಸದ ಜಿಸಿ ಚಂದ್ರಶೇಖರ್!

ಸದಾ ಕರ್ನಾಟಕ ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಇದೀಗ ಮತ್ತೊಮ್ಮೆ ಕನ್ನಡಿಗರ ಜ್ವಲಂತ ಸಮಸ್ಯೆಯ ಕುರಿತಾಗಿ ದೆಹಲಿಯ ಸಂಸತ್ ಭವನದಲ್ಲಿ ಧ್ವನಿಯೆತ್ತಿದ್ದಾರೆ. ಹೌದು, ನೆನ್ನೆ ಸಂಸತ್ ನಲ್ಲಿ ಮಾತನಾಡಿದ ಸಂಸದ ಚಂದ್ರಶೇಖರ್ ಕರ್ನಾಟಕಕ್ಕೆ ಸಿಗಬೇಕಾದ ನೆರೆ ಪರಿಹಾರದ ಬಗ್ಗೆ ಕನ್ನಡದಲ್ಲಿಯೇ ಸಭಾಧ್ಯಕ್ಷ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಒತ್ತಾಯಿಸಿದರು.

 

 

“ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಮೂರನೇ ಭಾರಿ ನೆರೆ ಹಾವಳಿಯಿಂದ ೨೨ ಜಿಲ್ಲೆಗಳ ೧೦೨ ತಾಲೂಕುಗಳ ಜನ ಜಾನುವಾರುಗಳು ತತ್ತರಿಸಿ ಹೋಗಿದೆ. ಕಷ್ಟದಲ್ಲಿ ಇರುವವರಿಗೆ ನೆರವು ನೀಡಲು ಬೇಕಾದಷ್ಟು ಹಣಕಾಸಿನ ಕೊರತೆ ಇರುವುದರಿಂದ ರಾಜ್ಯ ಸರ್ಕಾರವು ಅಸಹಾಯಕವಾಗಿ ಕೂತಿದೆ. 100ಕ್ಕೂ ಹೆಚ್ಚು ಜನರು 3000ಕ್ಕೂ ಜಾನುವಾರುಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿವೆ. ಸುಮಾರು 3,22,448 ಹೆಕ್ಟರ್ ಕೃಷಿ ಭೂಮಿ ಭೂ ಕುಸಿತದಿಂದ ಹಾನಿಯಾಗಿದೆ. ಏಳುವರೆ ಲಕ್ಷ ಹೆಕ್ಟರ್ ಭೂಮಿಯಲ್ಲಿ ಬೆಳೆದಿದ್ದ ಪಸಲು ನಾಶವಾಗಿದೆ. ಹಾಗೆಯೇ 21,818ರಸ್ತೆ ನಾಶಗೊಂಡಿದೆ.”

“ರಾಜ್ಯ ಸರ್ಕಾರ 38 ಸಾವಿರ ಕೋಟಿ ನೆರವು ಬೇಕೆಂದು ಅಂದಾಜು ಮಾಡಿ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರವು ನೆರೆ ಹಾವಳಿ ಆದ 50 ದಿನಗಳ ನಂತರ ನಮಗೆ ಕೊಟ್ಟಿದ್ದು ಕೇವಲ 1200 ಕೋಟಿ.. ರಾಷ್ಟದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದೆ, ಹಾಗೆಯೆ ನಮ್ಮ ರಾಜ್ಯದ ಜಿಡಿಪಿ ಕೂಡ ದೇಶದ ಜಿಡಿಪಿಗಿಂತ ಉತ್ತಮವಾಗಿದೆ.” ಎಂದು ಜಿಸಿ ಚಂದ್ರಶೇಖರ್ ಕನ್ನಡದಲ್ಲಿಯೇ ಹೇಳಿದರು.

ಸಂಸದರು ಕನ್ನಡದಲ್ಲಿ ಮಾತನಾಡಿದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕನ್ನಡಿಗರ ಪರ ಕಾಳಜಿ ತೋರಿಸಿದ್ದಕ್ಕೆ ಸಂಸದರಿಗೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top