fbpx
ಸಮಾಚಾರ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗವಕಾಶಗಳು

ಕರ್ನಾಟಕ ಅರಣ್ಯ ಇಲಾಖೆಯು ಅಗತ್ಯ ಅರಣ್ಯ ವ್ಯವಸ್ಥಾಪನಾಧಿಕಾರಿ (Forest Settlement Officer) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 10/12/2019 ಕೊನೆಯ ದಿನವಾಗಿದ್ದು, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಕೋಲಾರ, ಹಾಸನ, ರಾಯಚೂರು, ಧಾರವಾಡದಲ್ಲಿ ಕೆಲಸ ಮಾಡಬೇಕಿದೆ. ಕರ್ತವ್ಯ ನಿರ್ವಹಿಸುವ ಕೇಂದ್ರಸ್ಥಾನದ ಜಿಲ್ಲಾ ವ್ಯಾಪ್ತಿಯ ಅರ್ಜಿದಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅರ್ಹತೆ:
ಅರ್ಜಿದಾರರು ಸಹಾಯಕ ಆಯುಕ್ತರು (ಕಂದಾಯ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರಬೇಕು. ಅರಣ್ಯ ಮೋಜಣಿ ಹಾಗೂ ಗಡಿರೇಖೆ ಗುರುತಿಸುವಿಕೆ ಮತ್ತು ನಕಾಶೆ ತಯಾರಿಕೆ, ಭೂ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯದಂತೆ ಕರ್ತವ್ಯ ನಿರ್ವಹಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://www.aranya.gov.in/new/homesh.aspx ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಡಿಸೆಂಬರ್ 10,2019ರೊಳಗೆ ಪೋಸ್ಟ್ ಮೂಲಕ ತಲುಪಿಸಬೇಕಿರುತ್ತದೆ.

ಕಚೇರಿಯ ವಿಳಾಸ:
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೂ (ಮುಖ್ಯಸ್ಥರು ಅರಣ್ಯ ಪಡೆ),
ಅರಣ್ಯ ಭವನ,
ಮಲ್ಲೇಶ್ವರಂ, ಬೆಂಗಳೂರು -560003

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top