fbpx
ಸಮಾಚಾರ

10000 ಶಾಲಾ ಮಕ್ಕಳಿಗೆ ಉಚಿತ ನೇತ್ರ ತಪಾಸಣೆ ಮಾಡಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪುನೀತ್ ರಾಜಕುಮಾರ್!

ವರನಟ ಡಾ.ರಾಜ್‍ಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ಆಗಿದ್ದರು. ಅವರ ಹೆಸರಿನಲ್ಲಿ ಆರಂಭವಾದ ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರವು ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ನೇತ್ರದಾನದ ಬಗ್ಗೆ ಜಾಗೃತಿ ಹಾಗೂ ಉಚಿತ ಕಣ್ಣಿನ ತಪಾಸಣೆ ನಡೆಸುತ್ತಾ ಸಾಗುತ್ತಿದೆ.

 

 

ಇದೀಗ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಸಿದ್ದಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಹಾಗು ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ವಿಚಾರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

‘ನೇತ್ರದಾನ ಮಹಾದಾನ. ಡಾ|| ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ|| ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳು ನಿನ್ನೆ ಸಿದ್ದಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗು ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು. ಹಾಗೂ ಒಟ್ಟಾಗಿ 10,000 ಶಾಲಾ ಮಕ್ಕಳು “ನೇತ್ರಗಳ ರಕ್ಷಣೆ ನಮ್ಮ ಗುರಿ” “ಪ್ರಾಕೃತಿಕ ಜೀವನ ನಮ್ಮ ದಾರಿ” ಎಂಬುವ ಫಲಕ ಪ್ರದರ್ಶಿಸಿ Indian Book of Records ಮತ್ತು Asia Book of Records ನಲ್ಲಿ ದಾಖಲಿಸಲಾಯಿತು #DonateEyes #GiftSight ಅಂತಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top