fbpx
ಸಮಾಚಾರ

ಆರ್ಥಿಕ ಸಂಕಷ್ಟದಿಂದ ಬಾಗಿಲು ಮುಚ್ಚಿದ ಸಿದ್ದಾರ್ಥ್ ಒಡೆತನದ ಕಂಪನಿ: ಕಾರ್ಮಿಕರು ಪರದಾಟ!

ಪ್ರಖ್ಯಾತ “ಕಾಫಿ ಡೇ’ಯ ಅಂಗಸಂಸ್ಥೆ ಡಾರ್ಕ್‌ ಫಾರೆಸ್ಟ್‌ ಫರ್ನಿಚರ್‌ (ಡ್ಯಾಪ್ಕೋ) ಕಂಪನಿಗೆ ಸೋಮವಾರ ಶಾಶ್ವತವಾಗಿ ಬೀಗ ಹಾಕಲಾಗಿದೆ. “ಕಾಫಿ ಡೇ’ ಸಂಸ್ಥಾಪಕ ಸಿದ್ದಾರ್ಥ್ ಹೆಗಡೆ ಸಾವಿನ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ.

 

 

“ಕಾಫಿ ಡೇ ಗ್ಲೋಬಲ್‌’ ಮುಂಭಾಗದ ಗೇಟಿನ ಮೇಲೆ ಸಂಸ್ಥೆಯನ್ನು ಮುಚ್ಚಿರುವ ಕುರಿತು ನೋಟಿಸ್‌ ಅಂಟಿಸಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ 66 ಜನರನ್ನು ಏಕಾಏಕಿ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಸೋಮವಾರ ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ 68 ಜನರನ್ನು ಗೇಟಿನ ಬಳಿಯೇ ತಡೆದ ಸೆಕ್ಯುರಿಟಿ ಗಾರ್ಡ್‌ಗಳು, ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ. ಒಳಗೆ ಬಿಡದಂತೆ ಆದೇಶ ಬಂದಿದೆ ಎಂದು ತಿಳಿಸಿದರು.

ಸಿದ್ಧಾರ್ಥ ಅವರ ಮರಣ ನಂತರ ಡ್ಯಾಫ್ಕೊ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅದರ ಅಭಿವೃದ್ಧಿಗೆ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಸಿದ್ಧಾರ್ಥ ಅವರ ಮರಣದ ನಂತರ ಸಾಕಷ್ಟು ನಷ್ಟ ಅನುಭವಿಸಿದ್ದು, ಈ ಕಾರಣದಿಂದ ನವೆಂಬರ್ 25ರಿಂದ ಡ್ಯಾಫ್ಕೊ ಘಟಕದ ಎಲ್ಲ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಂಪನಿ ಗೇಟ್ ಬಳಿ ಅಂಟಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top