fbpx
ಸಮಾಚಾರ

ಧಾರ್ಮಿಕ ಭಾವನೆಗೆ ಧಕ್ಕೆ: ‘ದಬಾಂಗ್3’ ವಿರುದ್ಧ ಹಿಂದೂ ಜನ ಜಾಗೃತಿ ಸಮಿತಿ ಆಕ್ರೋಶ!

ಬಾಲಿವುಡ್ ಮಂದಿ ಖರ್ಚಿಲ್ಲದೇ ತಮ್ಮ ಸಿನಿಮಾ ಪ್ರಚಾರಕ್ಕಾಗಿ ವಿವಾದದ ರೂಟು ಹಿಡಿದ್ದಾರೆಯೇ ಎಂಬ ಡೌಟ್ ಹಲವರಲ್ಲಿ ಮೂಡಿಕೊಂಡಿದೆ. ಏಕೆಂದರೆ ಮಾಮೂಲಾಗಿ ಒಂದು ಚಿತ್ರದ ಪ್ರಚಾರಕ್ಕೆ ಅದರ ಒಟ್ಟಾರೆ ಬಜೆಟ್ಟಿಗೆ ಸರಿಸಮನಾದ ಕಾಸು ಖರ್ಚು ಮಾಡಬೇಕಾಗುತ್ತೆ. ಆದರೆ ಯಾರನ್ನಾದರೂ ಕೆರಳಿಸುವ ಸನ್ನಿವೇಶವನ್ನು ಸೃಷ್ಟಿಸಿ ಬಿಟ್ಟರೆ ಪ್ರಚಾರವೆಂಬುದು ಹೋದಲ್ಲಿ ಬಂದಲ್ಲಿ ಹಿಂಬಾಲಿಸಿಕೊಂಡು ಬರುತ್ತದೆ. ಇಂಥಾದ್ದೇ ಒಂದು ಫಾರ್ಮುಲಾವನ್ನು ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ‘ದಬಾಂಗ್ 3’ ಚಿತ್ರವೂ ಕೂಡ ಅನುಸರಿಸಲು ಮುಂದಾಗಿದೆಯಾ ಎಂಬ ಅನುಮಾನ ಪ್ರೇಕ್ಷಕರ ವಲಯದಲ್ಲಿ ದಟ್ಟವಾಗಿದೆ.

 

 

ದಬಾಂಗ್-3 ಚಿತ್ರದ ಬಿಡುಗಡೆಗೂ ಮುನ್ನ ಸಂಕಷ್ಟವೊಂದು ಎದುರಾಗಿದೆ. ಸಿನಿಮಾದಲ್ಲಿನ ಕೆಲವೊಂದು ದೃಶ್ಯಗಳಿಗೆ ಹಿಂದೂ ಜನ ಜಾಗೃತಿ ಸಮಿತಿಯ ಮಹಾರಾಷ್ಟ್ರ ಹಾಗೂ ಛತ್ತೀಸ್​ಗಢದ ಶಾಖೆಗಳು ಆಕ್ಷೇಪ ಎತ್ತಿವೆ. ನಮ್ಮ ಧಾರ್ಮಿಕ ಭಾವನೆಗಳಿಗೆ ನೂವುಂಟು ಮಾಡಿರುವ ಕೆಲ ದೃಶ್ಯಗಳನ್ನು ಸೆನ್ಸಾರ್ ಮಂಡಳಿ ತೆಗೆಯಲು ಸೂಚಿಸಬೇಕು ಅಂತ ಒತ್ತಾಯಿಸಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ದೃಶ್ಯದಲ್ಲಿ ಹಿಂದೂ ದೇವರುಗಳಾದ ರಾಮ ಮತ್ತು ಶಿವನನ್ನು ಅವಮಾನಿಸಲಾಗಿದೆ. ಅಲ್ಲದೇ ಪಾಶ್ಚಾತ್ಯ ಹಾಡುಗಳಿಗೆ ಸಾಧುಗಳು ಡ್ಯಾನ್ಸ್ ಮಾಡುತ್ತಿರೋದು ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದೆ. ಮುಸ್ಲಿಂ ಅಥವಾ ಕ್ರಿಶ್ಚಿಯನ್ ಪಾದ್ರಿಗಳನ್ನು ಸಿನಿಮಾಗಳಲ್ಲಿ ಇದೇ ರೀತಿ ತೋರಿಸುತ್ತಾರೆಯೇ ಎಂದು ಹಿಂದೂ ಜನ ಜಾಗೃತಿ ಸಮಿತಿ ಪ್ರಶ್ನಿಸಿದೆ. ಅಲ್ಲದೇ, ‘ದಬ್ಬಂಗ್-3’ ಚಿತ್ರದಲ್ಲಿ ಹಿಂದೂ ದೇವತೆಗಳಾದ ರಾಮ ಮತ್ತು ಶಿವವನ್ನೂ ಅವಮಾನಿಸಲಾಗಿದೆ ಎಂಬುದು ಇದೇ ಸಮಿತಿಯ ಆರೋಪ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top