fbpx
ಸಮಾಚಾರ

ಗ್ರಾಹಕರ ಕಣ್ಣಲ್ಲಿ ಕಣ್ಣೀರು ತಂದ ಈರುಳ್ಳಿ: ಶತಕ ದಾಟಿದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಗನ ಮುಟ್ಟಿದ್ದು, ಗುರುವಾರ ಈರುಳ್ಳಿ ಬೆಲೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹೆಚ್ಚಳವಾಗಿದೆ. ಕತ್ತರಿಸುವಾಗ ಮಾತ್ರವಲ್ಲದೇ ಖರೀದಿಸುವಾಗ ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್‍ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.

ಅನಾವೃಷ್ಟಿಯಿಂದಾಗಿ ಈ ಬಾರಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಪರಿಣಾಮ ಉತ್ಪಾದನೆ ಕುಂಠಿತಗೊಂಡು ದೇಶಾದ್ಯಂತ ಬೆಲೆ ಗಗನಕ್ಕೇರಿ ಕುಳಿತಿದೆ. ಈ ಸಮಸ್ಯೆಯಿಂದ ಪಾರಾಗಲು ಈಗಾಗಲೇ ಕೇಂದ್ರ ಸರ್ಕಾರ ವಿದೇಶಗಳಿಂದ 6000 ಟನ್‌ ಈರುಳ್ಳಿ ಆಮದಿಗೆ ಅನುಮತಿ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top