fbpx
ಸಮಾಚಾರ

ನಿಯಮ ಉಲ್ಲಂಘಿಸಿದ ದುಬಾರಿ ಕಾರಿಗೆ ಬರೋಬ್ಬರಿ 9.8 ಲಕ್ಷ ರೂ. ದಂಡ!

ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಿದ್ದಕ್ಕಾಗಿ ಪೊಲೀಸರು ಹಾಕಿದ ದಂಡವನ್ನು ಕಂಡು ಕಾರು ಮಾಲೀಕ ಬೆಚ್ಚಿ ಬಿದ್ದಿದ್ದಾನೆ. ಗುಜರಾತಿನಲ್ಲಿ ಈ ಘಟನೆ ನಡೆದಿದ್ದು, ಅಹಮದಾಬಾದ್ ಪೊಲೀಸರು ಪೋರ್ಷೆ 911 ಕಾರಿನ ನಂಬರ್ ಪ್ಲೇಟ್ ಹಾಗೂ ಅಧಿಕೃತ ದಾಖಲೆಗಳು ಇಲ್ಲದ್ದಕ್ಕೆ ಮಾಲೀಕನಿಗೆ 9.8 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಅಹಮದಾಬಾದ್‍ನ ಸಿಂಧು ಭವನ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಈ ಐಷಾರಾಮಿ ಕಾರು ಸಂಚರಿಸುತ್ತಿದ್ದನ್ನು ಕಂಡ ಪೊಲೀಸರು ಈ ಪರಿಪ್ರಮಾಣದ ದಂಡ ವಿಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಸಿಲ್ವರ್ ಬಣ್ಣದ ಫೋರ್ಶ್ 911 ಕಾರು ಸುಮಾರು 2 ಕೋಟಿ ರೂ ಮೌಲ್ಯದ್ದಾಗಿದೆ. ಆದರೆ ಚಾಲಕ ಕಾರಿಗೆ ಸೂಕ್ತ ನಂಬರ್ ಪ್ಲೇಟ್ ಅಳವಡಿಸಿಲ್ಲ. ಅಲ್ಲದೆ ಕಾರಿನಲ್ಲಿ ಸರಿಯಾದ ದಾಖಲೆಗಳೂ ಕೂಡ ಇಲ್ಲ. ಇದೇ ಕಾರಣಕ್ಕೆ ಈ ಹಿಂದಿನ ಎಲ್ಲ ದಂಡಗಳನ್ನು ಲೆಕ್ಕ ಹಾಕಿ ಇದೀಗ 9.8ಲಕ್ಷ ರೂಗಳನ್ನು ದಂಡ ಹಾಕಲಾಗಿದೆ.

ಪ್ರಸ್ತುತ ಕಾರನ್ನು ತಮ್ಮ ವಶಕ್ಕೆ ಪಡೆಯಲಾಗಿದ್ದು, ದಂಡದ ಸಂಪೂರ್ಣ ಹಣ ಬಂದ ಬಳಿಕವಷ್ಟೇ ಕಾರನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇಷ್ಟು ದುಬಾರಿ ಮೊತ್ತದ ದಂಡ ವಿಧಿಸಿರುವುದಕ್ಕೆ ಐಷಾರಾಮಿ ಕಾರಿನ ಮಾಲೀಕರು ಕಂಗಾಲಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top