fbpx
ಸಮಾಚಾರ

‘ಬಿಸ್ಲಲ್ಲಿ ಹೆಂಗಮ್ಮ ನೋಡೋದು..?’ ಯಶ್ ಮಗಳು ತೋರಿಸುತ್ತಾಳೆ ನೋಡಿ.

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಜೋಡಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಅದರಲ್ಲೂ ಮಗಳು ಐರಾಳ ಮುದ್ದಾದ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಯಶ್ ತಮ್ಮ ಮಗಳ ಮತ್ತೊಂದು ಮುದ್ದಾದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

 

 

ಈ ವಿಡಿಯೋದಲ್ಲಿ ಮುದ್ದಾದ ಐರಾಗೆ ಬಿಸಿಲನ್ನು ಹೇಗೆ ನೋಡುವುದು ಎಂದು ಕೇಳುತ್ತಾರೆ. ಐರಾ ಮುದ್ದು ಮುಖದಲ್ಲಿ ಎಕ್ಸ್ ಪ್ರೆಶನ್ ಕೂಡುತ್ತಾ ಬಿಸಿಲು ನೋಡುವುದನ್ನು ತೋರಿಸುತ್ತಾಳೆ. ಈ ವಿಡಿಯೋವನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರೋ ರಾಧಿಕಾ ಪಂಡಿತ್, When ayra shows u ‘ಬಿಸಿಲಲ್ಲಿ ಹೇಗೆ ನೋಡೋದು’ ಅಂತಾ ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ಪೋಸ್ಟ್​​ ಆಗಿ ಕೇವಲ 2 ಗಂಟೆಗಳಲ್ಲಿ 2 ಲಕ್ಷ 50 ಸಾವಿರಕ್ಕೂ ಅಧಿಕ ಜನರಿಂದ ಪ್ರಶಂಸೆ ಪಡೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top