fbpx
ಸಮಾಚಾರ

ರಾಕಿಂಗ್ ಸ್ಟಾರ್ ಮುಡಿಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಗರಿ!

ಕೆಜಿಎಫ್ ಚಿತ್ರದ ನಂತ್ರ ರಾಕಿಂಗ್ ಸ್ಟಾರ್ ಯಶ್ ಗೆ ಒಂದಾದ ಮೇಲೊಂದರಂತೆ ಪ್ರಶಸ್ತಿಗಳು ಬರುತ್ತಲೇ ಇವೆ. ಇದೀಗ ಆ ಸಾಲಿಗೆ ಇನ್ನೊಂದು ಪ್ರಶಸ್ತಿ ಸೇರ್ಪಡೆಯಾಗಿದೆ. ಮುಗಳಖೋಡ- ಜಿಡಗ ಮಠ ಕೊಡುವ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.

ಡಿಸೆಂಬರ್ 2 ರಂದು ಬೆಂಗಳೂರಿನ ಕೆಂಪೇಗೌಡ ಕನ್ವೇನ್ಷನ್​ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಗೆ ಡಾ.ಮುರುಘರಾಜೇಂದ್ರ ಸ್ವಾಮೀಜಿ 35ನೇ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಇದೆ ಸಮಾರಂಭದಲ್ಲಿಯೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು​ ಯಶ್​ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ. ಸದ್ಯ ರಾಕಿಂಗ್​ ಸ್ಟಾರ್​​ ಗೆ ಪ್ರಶಸ್ತಿ ದೊರಕಿರುವುದು ಅಭಿಮಾನಿಗಳಲ್ಲಿ ದೊಡ್ಡ ಸಂತಸ ತಂದಿದೆ.

ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಾಪ್ಟರ್ ೨ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರವೂ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಕೂಡ ನಟಿಸುತ್ತಿರುವುದು ಚಿತ್ರಕ್ಕೆ ಮತ್ತಷ್ಟು ಮೈಲೇಜ್ ತಂದು ಕೊಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top