fbpx
ಸಮಾಚಾರ

ನೆರೆ ಪರಿಹಾರದಲ್ಲಿ ಕೇಂದ್ರ ಸರ್ಕಾರ ತೋರಿದ ಮಲತಾಯಿ ದೋರಣೆ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಲು ಬಿಡದ ವೆಂಕಯ್ಯ ನಾಯ್ಡು

ಕರ್ನಾಟಕದಲ್ಲಿ ಮಹಾ ಪ್ರವಾಹ ಬಂದು ಬರೋಬ್ಬರಿ 2 ತಿಂಗಳೇ ಕಳೆದಿದ್ದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಯಾಪೈಸೆ ಪರಿಹಾರ ಸಿಕ್ಕಿರಲಿಲ್ಲ. ಕೇಂದ್ರದ ಈ ನಿರ್ಲಕ್ಷ್ಯದಿಂದ ಬೇಸತ್ತ ಕನ್ನಡಿಗರು ಕೇಂದ್ರ ಸರ್ಕಾದರ ವಿರುದ್ಧ ಆಕ್ರೋಶಗೊಂಡಿದ್ದರು. ನಂತರ ಎಚ್ಚೆತ್ತುಕೊಂಡಿದ್ದ ಕೇಂದ್ರ ಮಧ್ಯಂತರ ಪರಿಹಾರ ಘೋಷಣೆ ಮಾಡಿತ್ತು.. ಕರ್ನಾಟಕ ಸರ್ಕಾರ ನೆರೆಯಿಂದಾಗಿ 3800 ಕೋಟಿ ನಷ್ಟವಾಗಿದೆ ಎಂದು ಅಂದಾಜು ವರದಿ ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಿದೆ. ಈಗ ಕೇವಲ 1200 ಕೋಟಿ ಬಿಡುಗಡೆ ಮಾಡಿತ್ತು.

 

 

 

 

ಇದೀಗ ಈ ಬಗ್ಗೆ ರಾಜ್ಯ ಸಭೆಯಲ್ಲಿ ಸಂಸದ ಜಿಸಿ ಚಂದ್ರಶೇಖರ್ ಧ್ವನಿ ಎತ್ತಿದ್ದಾರೆ. ಸಂಸತ್ ನಲ್ಲಿ ಮಾತನಾಡಿದ ಸಂಸದ ಚಂದ್ರಶೇಖರ್ ಕರ್ನಾಟಕಕ್ಕೆ ಸಿಗಬೇಕಾದ ನೆರೆ ಪರಿಹಾರದ ಬಗ್ಗೆ ಕನ್ನಡದಲ್ಲಿಯೇ ಸಭಾಧ್ಯಕ್ಷ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಒತ್ತಾಯಿಸಿದರು.

“ಕರ್ನಾಟಕದಲ್ಲಿ ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಮೂರನೇ ಭಾರಿ ನೆರೆ ಹಾವಳಿಯಿಂದ ೨೨ ಜಿಲ್ಲೆಗಳ ೧೦೨ ತಾಲೂಕುಗಳ ಜನ ಜಾನುವಾರುಗಳು ತತ್ತರಿಸಿ ಹೋಗಿದೆ. ಕಷ್ಟದಲ್ಲಿ ಇರುವವರಿಗೆ ನೆರವು ನೀಡಲು ಬೇಕಾದಷ್ಟು ಹಣಕಾಸಿನ ಕೊರತೆ ಇರುವುದರಿಂದ ರಾಜ್ಯ ಸರ್ಕಾರವು ಅಸಹಾಯಕವಾಗಿ ಕೂತಿದೆ. 100ಕ್ಕೂ ಹೆಚ್ಚು ಜನರು 3000ಕ್ಕೂ ಜಾನುವಾರುಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿವೆ. ಸುಮಾರು 3,22,448 ಹೆಕ್ಟರ್ ಕೃಷಿ ಭೂಮಿ ಭೂ ಕುಸಿತದಿಂದ ಹಾನಿಯಾಗಿದೆ. ಏಳುವರೆ ಲಕ್ಷ ಹೆಕ್ಟರ್ ಭೂಮಿಯಲ್ಲಿ ಬೆಳೆದಿದ್ದ ಪಸಲು ನಾಶವಾಗಿದೆ. ಹಾಗೆಯೇ 21,818ರಸ್ತೆ ನಾಶಗೊಂಡಿದೆ.”

“ರಾಜ್ಯ ಸರ್ಕಾರ 38 ಸಾವಿರ ಕೋಟಿ ನೆರವು ಬೇಕೆಂದು ಅಂದಾಜು ಮಾಡಿ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರವು ನೆರೆ ಹಾವಳಿ ಆದ 50 ದಿನಗಳ ನಂತರ ನಮಗೆ ಕೊಟ್ಟಿದ್ದು ಕೇವಲ 1200 ಕೋಟಿ.. ರಾಷ್ಟದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದೆ, ಹಾಗೆಯೆ ನಮ್ಮ ರಾಜ್ಯದ ಜಿಡಿಪಿ ಕೂಡ ದೇಶದ ಜಿಡಿಪಿಗಿಂತ ಉತ್ತಮವಾಗಿದೆ.” ಎಂದು ಜಿಸಿ ಚಂದ್ರಶೇಖರ್ ಕನ್ನಡದಲ್ಲಿಯೇ ಹೇಳಿದರು.

ಸಂಸದರು ಈ ರೀತಿ ಕೇಂದ್ರ ಸರ್ಕಾರದ ಮಲತಾಯಿ ದೋರಣೆ ಬಗ್ಗೆ ಮಾತನಾಡುತ್ತಿದ್ದಂತೆ ಮುಂದೆ ಮಾತನಾಡುವುದಕ್ಕೆ ಬಿಡದ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಚಂದ್ರಶೇಖರ್ ಅವರನ್ನು ಕುಳಿತುಕೊಳ್ಳುವಂತೆ ಹೇಳಿದರು. “ಇನ್ನು ಮುಂದೆ ಕರ್ನಾಟಕದ ಸಮಸ್ಯೆಗಳನ್ನು ಕನ್ನಡದಲ್ಲಿ ಸದನದಲ್ಲಿ ಹೇಳಬೇಡಿ, ಇದು ರೆಕಾರ್ಡ್ ಆಗಲಿ ಅಂತಲೇ ಹೇಳುತ್ತಿದ್ದೇನೆ” ಎಂದು ಹೇಳಿದರು ವೆಂಕಯ್ಯ ನಾಯ್ಡು ಅವರ ಈ ನಡೆ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top