fbpx
ಸಮಾಚಾರ

ದಿನಕ್ಕೆ ಒಂಬತ್ತು ಗಂಟೆ ನಿದ್ರೆ ಮಾಡಿದರೇ ಒಂದು ಲಕ್ಷ ಸಂಬಳ ನೀಡಲಿರುವ ಬೆಂಗಳೂರು ಕಂಪೆನಿ!

ನಿದ್ದೆ ಮಾಡಲು ಇಷ್ಟಪಡುವವರಿಗೆ ಭಾರತೀಯ ಸ್ಟಾಟ್‍ಅಪ್ ಇಂಟರ್ನ್‌ಶಿಪ್ ಶುರು ಮಾಡಿದ್ದು 1 ಲಕ್ಷ ರೂ. ಸಂಬಳದ ಆಫರ್ ನೀಡಿದೆ. Wakefit ಕಂಪನಿ ತನ್ನ ವೆಬ್‍ಸೈಟ್‍ನಲ್ಲಿ ಇಂತಹದೊಂದು ಆಫರ್ ಪ್ರಕಟಿಸಿದ್ದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿದೆ. ಪ್ರತಿ ರಾತ್ರಿ 9 ಗಂಟೆ, ಪ್ರತಿ ವಾರ 100 ದಿನ ಮಲಗುವವರಿಗೆ ಕಂಪನಿ ಒಂದು ಲಕ್ಷ ರೂ. ಸಂಬಳ ನೀಡಲಿದೆ.

ಅರ್ಹತೆಗಳೇನಿರಬೇಕು?
ನಿದ್ರೆ ಮಾಡುವ ಕೆಲಸಕ್ಕೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ, ಕೆಲವು ಅರ್ಹತೆಗಳನ್ನು ನೀವು ಹೊಂದಿರಬೇಕು. ಯಾವಾಗೆಂದರೆ ಆಗ, ಎಲ್ಲಿ ಬೇಕಾದರಲ್ಲಿ ನಿದ್ರೆ ಮಾಡುವ ಶಕ್ತಿಯಿರಬೇಕು. ಕಣ್ಮುಚ್ಚಿದರೆ ಸಾಕು ನಿದ್ರಿಸುವ ಸಾಮರ್ಥ್ಯ ಇರಬೇಕು. ನಿದ್ರಿಸುವ ನಿಮ್ಮ ದಾಖಲೆಯನ್ನು ನೀವೇ ಮುರಿಯುವ ಯೋಗ್ಯತೆಯಿರಬೇಕು. ಇದರ ವಸ್ತ್ರಸಂಹಿತೆ ಪೈಜಾಮ. ಗೆದ್ದವರಿಗೆ 1 ಲಕ್ಷ ರೂ. ಸಿಗುತ್ತದೆ. ನಿದ್ರಾಪ್ರಮಾಣವನ್ನು ಗುರ್ತಿಸುವ ಟ್ರ್ಯಾಕರ್‌ ಸಿಗುತ್ತದೆ.

ಈ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಅಭ್ಯರ್ಥಿಗಳು ಪ್ರತಿ ರಾತ್ರಿ ಒಂಬತ್ತು ಗಂಟೆ ಅವಧಿ ನಿದ್ದೆ ಮಾಡಬೇಕಿರುತ್ತದೆ. ಒಟ್ಟಾರೆ ನೂರು ದಿನಗಳ ಕಾಲ ಹೀಗೆ ಮಾಡಿದರೆ ಸಾಕು 1 ಲಕ್ಷ ರೂಗಳ ಸ್ಟೈಫೆಂಡ್ ಅನ್ನು ಪಡೆಯಬಹುದು.

ಯಾಕೆ ಈ ರೀತಿಯ ಉದ್ಯೋಗ ಸೃಷ್ಟಿಸುತ್ತಿದೆ ಎಂದರೆ ಅಭ್ಯರ್ಥಿಗಳು ಸಂಸ್ಥೆಯ ಮ್ಯಾಟ್ರೆಸ್ ಬಳಸಿ ನಿದ್ದೆ ಮಾಡುವ ರೀತಿಯನ್ನು ಅಧ್ಯಯನ ಮಾಡುವ ಉದ್ದೇಶವನ್ನು ಒಳಗೊಂಡಿರುತ್ತದೆ ಹಾಗಾಗಿ ಸಂಸ್ಥೆಯು ಅಭ್ಯರ್ಥಿಯ ನಿದ್ರಾ ಶೈಲಿ ಬಗ್ಗೆ ತಿಳಿಯಲು ಸ್ಲೀಪ್ ಟ್ರಾಕರ್ ಒದಗಿಸಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top