fbpx
ಸಮಾಚಾರ

ಕೈಲಾಸ ದೇಶ ಸ್ಥಾಪಿಸುತ್ತೇನೆ ಎಂದ ನಿತ್ಯಾನಂದನಿಗೆ ಪ್ರಶ್ನೆ ಹಾಕಿದ ಅಶ್ವಿನ್​​​!!

ಸ್ವಯಂಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಈಕ್ವೆಡಾರ್ ನಲ್ಲಿ ತನ್ನದೇ ಆದ ದೇಶವನ್ನು ಕಟ್ಟಿದ್ದಾನೆ ಎಂಬ ಸುದ್ದಿ ಸಾಕಷ್ಟು ಟ್ರೋಲ್ ಆಗುತ್ತಿದ್ದು, ಇದೀಗ ಭಾರತ ತಂಡದ ಬೌಲರ್ ರವಿಚಂದ್ರನ್ ಅಶ್ವಿನ್ ಸಹ ಈ ಕುರಿತು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.

 

 

ನಿಮ್ಮದೇಯಾದ ದೇಶಕ್ಕೆ ಬರುವುದಾದರೆ ವೀಸಾ ಪಡೆಯುವ ಪ್ರಕ್ರಿಯೆ ಹೇಗೆ ಎಂದು ಅಶ್ವಿನ್​ ಪ್ರಶ್ನಿಸುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ. ಜಾಲತಾಣದಲ್ಲಿ ಅಶ್ವಿನ್​ ಟ್ವೀಟ್​ ವೈರಲ್​ ಆಗಿದೆ. 1000ಕ್ಕೂ ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದು, 16 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶ್ವಿನ್, ಆ ಸ್ಥಳದ ವೀಸಾ ಪಡೆಯಲು ಯಾವ ರೀತಿಯ ವಿಧಾನವಿದೆ? ಅಥವಾ ಇನ್ನೂ ಬರುವುದರಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅತ್ಯಾಚಾರ ಆರೋಪದಲ್ಲಿ ಗುಜರಾತ್​ ಪೊಲೀಸರು ನಿತ್ಯಾನಂದನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಆದರೂ ಈವರೆಗೂ ನಿತ್ಯಾನಂದನ ಸುಳಿವು ಮಾತ್ರ ದೊರೆತಿಲ್ಲ. ಹೀಗಿರುವಾಗ Kailaasa.org ಹೆಸರಿನ ವೆಬ್​ಸೈಟ್​ನಲ್ಲಿ ನಿತ್ಯಾನಂದ ಹೊಸ ದೇಶವನ್ನು ಸ್ಥಾಪಿಸಿರುವುದಾಗಿ ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಹಾಗೂ ಸಚಿವ ಸಂಪುಟ ಒಳಗೊಂಡ ಹಿಂದು ಸಾರ್ವಭೌಮ ರಾಷ್ಟ್ರವನ್ನು ಘೋಷಿಸಿರುವುದಾಗಿ ವೆಬ್​ಸೈಟ್​ನಲ್ಲಿ ಉಲ್ಲೇಖವಾಗಿದೆ. ನಿತ್ಯಾನಂದರ ಹಿಂದು ರಾಷ್ಟ್ರಕ್ಕೆ “ಕೈಲಾಸ” ಎಂದು ಹೆಸರಿಡಲಾಗಿದ್ದು, ವೆಬ್​ಸೈಟ್​ ಮೂಲಕ ಕಾಣಿಕೆಗಳನ್ನು ನೀಡುವುದರೊಂದಿಗೆ ನೂತನ ರಾಷ್ಟ್ರದ ಪೌರತ್ವ ಪಡೆದುಕೊಳ್ಳಬಹುದೆಂದು ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top