fbpx
ಸಮಾಚಾರ

‘ಹೆಣ್ಣು ಮಕ್ಕಳು ತಮ್ಮ ಜತೆ ಕಾಂಡೋಮ್ ಇಟ್ಗೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು’ನಿರ್ದೇಶಕನ ಪೋಸ್ಟ್ ವೈರಲ್!

ಹೈದರಾಬಾದ್ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ನಿರ್ದೇಶಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದಾನೆ. ಹೌದು, ತೆಲುಗು ಚಿತ್ರನಿರ್ದೇಶಕ ಡೇನಿಯಲ್ ಶ್ರವಣ್ ಹೇಳಿದ ವಿವಾದಾತ್ಮಕ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದೆ. ಬಳಿಕ ಈ ಪೋಸ್ಟ್ ತನ್ನ ಚಿತ್ರದ ವಿಲನ್ ಡೈಲಾಗ್ ಎಂದು ಡಿಲೀಟ್ ಮಾಡಿದ್ದಾನೆ.

 

 

ಪೋಸ್ಟ್ ನಲ್ಲಿ ಏನಿತ್ತು?
ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು. ಅತ್ಯಾಚಾರಕ್ಕೆ ಒಳಗಾದವರ ಹತ್ಯೆಯನ್ನು ನಿಯಂತ್ರಿಸುವ ಏಕೈಕ ದಾರಿ ಏನೆಂದರೆ ‘ಹಿಂಸಾಚಾರವಿಲ್ಲದೆ ಅತ್ಯಾಚಾರಗಳನ್ನು’ ಕಾನೂನುಬದ್ಧಗೊಳಿಸುವುದು. 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಈ ರೀತಿ ಪ್ರಕರಣಗಳು ನಡೆಯುವುದಿಲ್ಲ. ಭಾರತದ ಮಹಿಳೆಯರಿಗೆ ಸೆಕ್ಸ್ ಎಜುಕೇಶನ್ ಬಗ್ಗೆ ತಿಳಿದಿರಬೇಕು ಎಂದು ಬರೆದುಕೊಂಡಿದ್ದನು.

ಪುರುಷರ ಬಯಕೆ ಈಡೇರಿದರೆ ಅವರು ಮಹಿಳೆಯರನ್ನು ಕೊಲೆ ಮಾಡುವುದಿಲ್ಲ. ಸಮಾಜ, ಸರ್ಕಾರ ಹಾಗೂ ಮಹಿಳಾ ಸಂಘಟನೆ ನಿರ್ಭಯಾ ಕಾಯ್ದೆ, ಪೆಪ್ಪರ್ ಸ್ಪ್ರೇಯಿಂದ ಅತ್ಯಾಚಾರಿಗಳನ್ನು ಹೆದರಿಸುತ್ತಿದೆ. . ಮಹಿಳೆಯರು ಪುರುಷರ ಜೊತೆಗೆ ದೈಹಿಕ ಸಂಬಂಧ ಬೆಳೆಸುವುದು ಒಳ್ಳೆಯದು ಎಂದೆಲ್ಲಾ ಬೇಕು ಬೇಕಾದ ಹಾಗೆ ಬರೆದು ಶ್ರವಣ್ ಪೋಸ್ಟ್ ಹಾಕಿದ್ದನು.

ಹೇಗೆ ವೀರಪ್ಪನ್ ನ್ನು ಹತ್ಯೆ ಮಾಡಿದರೆ ಕಳ್ಳಸಾಗಾಣೆ ತಡೆಗಟ್ಟಲು ಸಾಧ್ಯವಿಲ್ಲವೋ, ಹೇಗೆ ಬಿನ್ ಲ್ಯಾಡೆನ್ ನ್ನು ಹತ್ಯೆ ಮಾಡಿದರೆ ಭಯೋತ್ಪಾದನೆ ನಿರ್ಮೂಲನೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ನಿರ್ಭಯ ಕಾನೂನು ತಂದರೆ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಅತ್ಯಾಚಾರಗಳನ್ನು ಕಾನೂನುಬದ್ಧಗೊಳಿಸಬೇಕು, 18 ರ ಮೇಲ್ಪಟ್ಟ ಯುವತಿಯರು ತಮ್ಮೊಂದಿಗೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳ ಲೈಂಗಿಕ ಬಯಕೆಗಳನ್ನು ಪೂರೈಸಬೇಕು ಹಾಗಾದಲ್ಲಿ ಪುರುಷರ ಲೈಂಗಿಕ ಬಯಕೆಗಳು ಈಡೇರಿದರೆ ಯಾರೊಬ್ಬರೂ ಮಹಿಳೆಯರನ್ನು ಹತ್ಯೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

ಈ ಪೋಸ್ಟ್ ಗೆ ಸಾರ್ವಜನಿಕರಾದಿಯಾಗಿ ಸೆಲಬ್ರಿಟಿಗಳೂ ಡೇನಿಯಲ್ ನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top