fbpx
ಸಮಾಚಾರ

ಡಿಸೆಂಬರ್ 06: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶುಕ್ರವಾರ, ಡಿಸೆಂಬರ್ 06 2019
ಸೂರ್ಯೋದಯ : 6:28 am
ಸೂರ್ಯಾಸ್ತ: 5:52 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಶುಕ್ಲಪಕ್ಷ
ತಿಥಿ : ದಶಮೀ ಪೂರ್ಣ ರಾತ್ರಿ
ನಕ್ಷತ್ರ: ಉತ್ತರಾಭಾದ್ರಪದ 22:58
ಯೋಗ: ಸಿಧ್ಧಿ 16:32
ಕರಣ: ತೈತುಲ 17:27 ಗರಿಜ ಪೂರ್ಣ ರಾತ್ರಿ

ಅಭಿಜಿತ್ ಮುಹುರ್ತ: 11:47 am – 12:33 pm
ಅಮೃತಕಾಲ : 5:36 pm – 7:23 pm

ರಾಹುಕಾಲ- 10:45 am – 12:10 pm
ಯಮಗಂಡ ಕಾಲ- 2:59 pm – 4:24 pm
ಗುಳಿಕ ಕಾಲ- 7:56 am – 9:21 am

 

 

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಧೈರ್ಯಗೆಡದೆ ಮುನ್ನಡೆಯಿರಿ. ಅಡಚಣೆಗಳು ತಾನಾಗಿಯೇ ದೂರವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಬುದ್ಧಿವಂತ ಜನರ ಒಡನಾಟ ಸಿಗುವುದು. ಕೆಲವು ಮಹತ್ತರ ವಿಷಯಗಳನ್ನು ಅರಿಯುವಿರಿ. ಹಾಗಾಗಿ ವರ್ತಮಾನದಲ್ಲಿ ಸುಖ-ಸಂತೋಷ ನೆಮ್ಮದಿಯಿಂದ ಇರುವಿರಿ. ಮನೆಯ ಸದಸ್ಯರ ಸಹಕಾರ ದೊರೆಯುವುದು.

ನೆರೆಹೊರೆಯವರೊಂದಿಗೆ ಪ್ರೀತಿ -ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿ. ಭಗವಂತನ ಆಶೀರ್ವಾದ ದೊರೆಯುವುದು.

ಜನರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ವಿಶೇಷವಾಗಿ ಮಾತಿನ ಮೇಲೆ ನಿಗಾ ಇಡಿ. ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ಕೆಲವೊಮ್ಮೆ ನೀವು ಆಡುವ ಮಾತು ವಿಕೋಪಕ್ಕೆ ಹೋಗುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಶಕ್ತಿಯಿಂದ ಬಹಳ ಉಪಯೋಗ ಪಡೆಯುವಿರಿ. ಜನರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಯಾಗಿ ಕಾಣುವಿರಿ. ಸಾಮಾಜಿಕವಾಗಿಯೂ ಕೀರ್ತಿ ಬೆಳಗುವುದು

 

ಎಲ್ಲರೊಂದಿಗೆ ಬೆರೆಯುವ ಸಹವಾಸಪ್ರಿಯರು. ಮಾತಿನ ಮೋಡಿಯಿಂದ ಜನರನ್ನು ಬಹಳ ಬೇಗ ನಿಮ್ಮತ್ತ ಸೆಳೆದುಕೊಳ್ಳುವಿರಿ. ನಾನ ಬಗೆಯ ಜನರ ಸಂಪರ್ಕದಿಂದ ಸಂತೋಷಪಡುವಿರಿ. ಹಿತೈಷಿಗಳಿಂದ ಮನಸ್ಸಿಗೆ ನೆಮ್ಮದಿ.

 

ಅತಿಥಿಗಳ ದಿಢೀರ್‌ ಆಗಮನವಾಗಲಿದೆ. ಬಂದವರಿಂದ ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲವು ವಿಚಾರಗಳು ತಿಳಿಯಲಿವೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನಹರಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಅತ್ತೆ ಒಡೆದ ಪಾತ್ರೆಗಳಿಗೆ ಬೆಲೆಯಿಲ್ಲ. ಅಂತೆಯೇ ಇಂದು ನೀವು ಮಾಡುವ ಕೆಲಸಗಳಲ್ಲಿ ಕೆಲವರು ತಪ್ಪನ್ನು ಕಾಣುವರು. ಅದು ಅಷ್ಟೇನೂ ಮಹತ್ವವಲ್ಲದಿದ್ದರೂ ಮಾನಸಿಕ ಕಿರಿಕಿರಿ ಉಂಟು ಮಾಡುವುದು. ಗುರುಹಿರಿಯರ ಅಪ್ಪಣೆ ಪಡೆದು ಕಾರ್ಯ ನಿರ್ವಹಿಸಿರಿ.

 

ಹಣವನ್ನು ತಿಪ್ಪೆಗೆ ಎಸೆದರೂ ಲೆಕ್ಕ ಬರೆದಿಡಬೇಕು ಎಂಬುದು ವ್ಯಾವಹಾರಿಕ ಜಾಣ್ಮೆಯ ಮಾತು. ಹಾಗಾಗಿ ನಿಮ್ಮ ಲೆಕ್ಕಪತ್ರಗಳನ್ನು ಒಂದೆಡೆ ಒಪ್ಪವಾಗಿ ಬರೆದಿಟ್ಟರೆ ಒಳ್ಳೆಯದು. ಇದರಿಂದ ಮುಂದೆ ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತ ಸಾಧಿಸಬಹುದು.

ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬೇಕೆ ಹೊರತು ಅವರ ಕೆಟ್ಟ ಚಾಳಿಗಳನ್ನು ನಕಲು ಮಾಡಬಾರದು. ಹಿರಿಯರಿಗೆ ಅಗೌರವ ತರುವ ಮಾತನ್ನು ಆಡದಿರುವುದು ಕ್ಷೇಮ. ಹಿರಿಯರ ಶಾಪ ನಿಮ್ಮ ಸಂತೋಷವನ್ನು ಕಸಿದುಕೊಳ್ಳುವುದು.

 

 

ನಾಲಿಗೆ ಮಾತನಾಡಿದರೆ ದವಡೆಹಲ್ಲಿಗೆ ತೊಂದರೆ. ಹಲ್ಲು ಮತ್ತು ನಾಲಿಗೆ ಒಟ್ಟಿಗೆ ಸಹಬಾಳ್ವೆ ನಡೆಸಿದರೆ ಜೀವನ ಸುಗಮ. ಅಂತೆಯೇ ಇಂದು ದುಡುಕಿ ಮಾತನಾಡದಿರಿ. ಇಲ್ಲದಿದ್ದರೆ ನಂತರ ಪಶ್ಚಾತ್ತಾಪ ಪಡಬೇಕಾಗುವುದು. ಆರೋಗ್ಯದ ಕಡೆ ಲಕ್ಷತ್ರ್ಯವಿರಲಿ.

ಹಳೆಯ ಗೆಳೆಯನ ಜೊತೆ ಸೇರಿ ಹೊಸ ಯೋಜನೆ ರೂಪಿಸುವಿರಿ. ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುವುದು. ಆರೋಗ್ಯ ಉತ್ತಮವಾಗಿರುವುದು. ನಾನಾ ಮೂಲಗಳಿಂದ ಹಣ ಹರಿದು ಬರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top