fbpx
ಸಮಾಚಾರ

ಬೆಂಗಳೂರಿಂದ ಬಳ್ಳಾರಿ ಕಡೆ ಹೊರಟ ‘ಕೆಜಿಎಫ್​- 2’ ಚಿತ್ರತಂಡ!

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಮಾಡಿತ್ತು. ಕೆಜಿಎಫ್-2 ಚಿತ್ರತಂಡ ಸರಳವಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನು ಆರಂಭಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸದ್ದು ಮಾಡಿದ್ದವು. ಕೆಜಿಎಫ್ ನಿರೀಕ್ಷೆಗಳ ಪರ್ವತವನ್ನೇ ಹುಟ್ಟಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಕೆಜಿಎಫ್ 2ಗಾಗಿ ದೇಶವೇ ಎದುರು ನೋಡುತ್ತಿದೆ.

ಈ ನಡುವೆ ‘ಕೆಜಿಎಫ್‌ 2’ ಚಿತ್ರತಂಡದಿಂದ ಹೊಸ ಸುದ್ದಿ ಸಿಕ್ಕಿದ್ದು ಚಿತ್ರತಂಡ ಸದ್ಯ ಶೂಟಿಂಗ್ ಅನ್ನು ಬೆಂಗಳೂರಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಿದೆ. ನಟ ಯಶ್‌ ಅವರು ಕೆಲವು ದಿನಗಳಿಂದಲೂ ಈ ಚಿತ್ರದ ಚಿತ್ರೀಕರಣದಿಂದ ಬ್ರೇಕ್‌ ಪಡೆದಿದ್ದರು. ಕಾರಣ, ಪತ್ನಿ ಹಾಗು ಮಗಳ ಜೊತೆ ಸಮಯ ಕಳೆಯಲು. ಇತ್ತೀಚೆಗೆ ತನ್ನ ಮಗಳ ಹುಟ್ಟುಹಬ್ಬ ಕೂಡ ಅದ್ಧೂರಿಯಾಗಿ ಆಚರಿಸಿದ ಯಶ್‌, ಈಗ “ಕೆಜಿಎಫ್-2′ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಚಿತ್ರದ ಚಿತ್ರೀಕರಣ ಬೆಂಗಳೂರಲ್ಲಿ ನಡೆಯುತ್ತಿದ್ದು, ಬುಧವಾರ ಯಶ್‌ ತಂಡ ಸೇರಿಕೊಂಡಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಲ್ಲಿ ನಡೆಯಲಿರುವ ಚಿತ್ರೀಕರಣ ಆ ನಂತರ ಬಳ್ಳಾರಿಯತ್ತ ಪಯಣ ಬೆಳೆಸಲಿದೆ. ಬಳ್ಳಾರಿಯಲ್ಲಿ ಚಿತ್ರದ ಮುಖ್ಯ ದೃಶ್ಯಗಳನ್ನು ಚಿತ್ರೀಕರಿಸಲು ನಿರ್ದೇಶಕ ಪ್ರಶಾಂತ್‌ ನೀಲ್‌ ತಯಾರಿ ನಡೆಸಿದ್ದಾರೆ.

ಅಷ್ಟೇ ಅಲ್ಲ, ರವೀನಾ ಟಂಡನ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅಧಿಕೃತ ಘೋಷಣೆಯೊಂದು ಪ್ರೊಡಕ್ಷನ್ ಹೌಸ್‌ನಿಂದ ಹೊರಬೀಳಬೇಕಿದೆ. 2020ರಲ್ಲಿ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top