fbpx
ಸಮಾಚಾರ

ಡಿಸೆಂಬರ್ 10: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಮಂಗಳವಾರ, ಡಿಸೆಂಬರ್ 10 2019
ಸೂರ್ಯೋದಯ : 6:30 am
ಸೂರ್ಯಾಸ್ತ: 5:53 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ಮಾರ್ಗಶಿರ
ಪಕ್ಷ : ಶುಕ್ಲಪಕ್ಷ
ತಿಥಿ : ತ್ರಯೋದಶೀ 10:43
ನಕ್ಷತ್ರ: ಕೃತಿಕೆ 29:58
ಯೋಗ: ಶಿವ 16:26
ಕರಣ: ತೈತುಲ 10:43 ಗರಿಜ 22:55

ಅಭಿಜಿತ್ ಮುಹುರ್ತ:11:49 am – 12:34 pm
ಅಮೃತಕಾಲ : 3:28 am – 5:08 am

ರಾಹುಕಾಲ- 3:01 pm – 4:25 pm
ಯಮಗಂಡ ಕಾಲ- 9:23 am – 10:47 am
ಗುಳಿಕ ಕಾಲ- 12:12 pm – 1:36 pm

 

ಮನುಜ ಬಯಸಿದ್ದು ಒಂದು ಆಗುವುದು ಮತ್ತೊಂದು. ಇದು ದೈವದ ನಿಯಮ. ಹಾಗಾಗಿ ನಿಮ್ಮ ಇಚ್ಛೆಯ ವಿರುದ್ಧ ಕಾರ್ಯಗಳು ನಡೆಯುವುದು. ಆರ್ಥಿಕ ಸ್ಥಿತಿಯು ಸಾಧಾರಣವಾಗಿರುತ್ತದೆ.

ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ಈದಿನ ಕಟಿಬದ್ಧರಾಗಿರುವಿರಿ. ಇದಕ್ಕೆ ಪೂರಕವಾಗಿ ಭಗವಂತನ ಆಶೀರ್ವಾದವು ನಿಮ್ಮ ಮೇಲಿರುವುದರಿಂದ ಒಳಿತಾಗುವುದು. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

ಬದುಕು ಕವಲು ಹಾದಿಯಲ್ಲಿದೆ ಎನ್ನವುದು ನಿಮ್ಮ ಭ್ರಮೆ. ಸಣ್ಣಪುಟ್ಟ ಸಮಸ್ಯೆಗಳು ಜೀವನದಲ್ಲಿ ಎದುರಾಗುವುದು. ಆದರೆ ಅದು ಕೂಡಾ ಮಂಜಿನಂತೆ ಕರಗುವುದು. ಆ ಬಗ್ಗೆ ಹೆಚ್ಚು ಚಿಂತನೆ ಮಾಡದೆ ನಿಶ್ಚಿಂತೆಯಿಂದ ಇರಿ.

ಇದ್ದಕ್ಕಿದ್ದಂತೆ ಆಧ್ಯಾತ್ಮದಲ್ಲಿ ಆಸಕ್ತಿ ಮೂಡುವುದು ಬದುಕಿನ ಅನೇಕ ಪ್ರಶ್ನೆಗಳಿಗೆ ಆಧ್ಯಾತ್ಮದಲ್ಲಿ ಉತ್ತರ ದೊರೆಯುವುದು. ಮಡದಿ ಮಕ್ಕಳೊಡನೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಮನೋಕಾಮನೆಗಳು ಪೂರ್ಣವಾಗುವುದು. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು.

 

ಒಳ್ಳೆಯ ದಿನಗಳು ನಿಮ್ಮ ಪಾಲಿಗೆ ಶುರುವಾಗಿವೆ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ಗಳಿಸಿಕೊಂಡಿದ್ದೀರಿ. ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿರುವುದನ್ನು ಗಮನಿಸಿ ಅಚ್ಚರಿ ಪಡುವಿರಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿರಿ.

 

ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಆದರೂ ಅದು ಉತ್ತಮ ಕಾರ್ಯಕ್ಕಾಗಿ ಮಾಡಿದ ಖರ್ಚಾದ್ದರಿಂದ ಮನಸ್ಸಿಗೆ ನೆಮ್ಮದಿ ನೀಡುವುದು. ಕೌಟುಂಬಿಕವಾಗಿ ಉತ್ತಮ ದಿನ. ಆರ್ಥಿಕ ಅಭಿವದ್ಧಿಯುಂಟಾಗುವುದು.

 

ಇಂದಿನ ಸಮಯವು ಸುಸಮಯವಾಗಿದೆ. ಆಪ್ತಮಿತ್ರನ ಭೇಟಿ ಆಗುವಿರಿ. ಹಲವು ವರ್ಷಗಳ ಸ್ನೇಹಕ್ಕೆ ಪುನರ್ಜೀವ ಬಂದಂತೆ ಆಗುವುದು. ಹರ್ಷದಾಯಕ ಮತ್ತು ಉಲ್ಲಾಸದ ದಿನ. ಸ್ನೇಹಿತನನ್ನು ಖುಷಿ ಪಡಿಸುವಿರಿ.

 

ಜಗತ್ತಿನಲ್ಲಿ ಸೋಲು-ಗೆಲುವು ಇದ್ದದ್ದೆ. ಅದನ್ನು ಕ್ರೀಡಾಮನೋಭಾವದಿಂದ ತೆಗೆದುಕೊಳ್ಳಿರಿ. ಹಿಂದೆ ಆದ ಹೋದ ಕೆಟ್ಟ ಘಟನೆಗಳನ್ನು ಮೆಲುಕು ಹಾಕುವುದು ತರವಲ್ಲ. ಸದಾ ಧನಾತ್ಮಕ ಚಿಂತನೆಯನ್ನು ಮಾಡಿರಿ. ಧನ್ಯತೆಯನ್ನು ಹೊಂದಿರಿ.

 

ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಚಿಂತಿಸಿ. ಮನೆಯ ಜವಾಬ್ದಾರಿ ಮತ್ತು ಕಚೇರಿಯ ಕೆಲಸ ಕಾರ್ಯಗಳ ಒತ್ತಡದ ಮಧ್ಯೆ ಸಂಗಾತಿಯ ಬಿರು ನುಡಿಗಳು ನಿಮ್ಮ ಅಂತಃಕಲಹವನ್ನು ಹೀರಿಬಿಡುವ ಸಾಧ್ಯತೆ.

ಮನೆ ಎಂದ ಮೇಲೆ ಸಣ್ಣಪುಟ್ಟ ವಾದ-ವಿವಾದಗಳು ಇದ್ದದ್ದೆ. ಆದರೆ ಅದನ್ನೆ ದೊಡ್ಡದು ಮಾಡಿಕೊಳ್ಳುವುದು ಜಾಣರ ಲಕ್ಷಣವಲ್ಲ. ಸ್ನೇಹಿತರ ಸಕಾಲಿಕ ಸಲಹೆಯಿಂದ ಮನಸ್ಸು ಶಾಂತವಾಗುವುದು. ಆರೋಗ್ಯದಲ್ಲಿ ಉತ್ತಮ.

 

 

ಸದಾ ನಿಮ್ಮ ವಿರುದ್ಧ ಮಾತನಾಡುತ್ತಿದ್ದ ಗೆಳೆಯನು ತನ್ನ ತಪ್ಪಿನ ಅರಿವಾಗಿ ತಮ್ಮ ಬಳಿ ಕ್ಷಮೆ ಯಾಚಿಸಲು ಬರುವನು. ಸಾಧ್ಯವಾದರೆ ಅವನನ್ನು ಕ್ಷಮಿಸಿಬಿಡಿ. ಸಮಾಜದಲ್ಲಿ ನಿಮಗೂ ಗೌರವ ಉಂಟಾಗುವುದು.

ಇದು ಪರಿವರ್ತನೆಯ ಸಮಯ. ಶುರುವಿನಲ್ಲಿ ನಿಮಗೆ ಕಿರಿಕಿರಿ ಅನ್ನಿಸಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ನಿಮಗಿದು ಯಶಸ್ಸಿನ ದೊಡ್ಡ ಮೆಟ್ಟಿಲು. ಅವಿವಾಹಿತರಿಗೆ ಸಂಗಾತಿಯ ಆಯ್ಕೆಯ ಅವಕಾಶಗಳು ಲಭಿಸುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top