ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಮಾಂಝಿ ಸೂಪರ್ ಲೀಗ್ ಟೂರ್ನಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೆ ಆಫ್ರಿಕನ್ ಬೌಲರ್ ತಬ್ರೈಜ್ ಶಂಸಿ ವಿಕೆಟ್ ಪಡೆದಾಗ ಮೈದಾನದಲ್ಲೇ ಮ್ಯಾಜಿಕ್ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ಎಂಎಸ್ಎಲ್ನ ಪಾರ್ಲ್ ರಾಕ್ಸ್ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆ ನಡೆಯುತ್ತಿರುವಾಗ ಮಾತನಾಡಿದ ವಿಡಿಯೋ ಇಂಟರ್ನೆಟ್ನಲ್ಲಿ ಭಾರೀ ಹರಿದಾಡುತ್ತಿದೆ.
One change – Viljoen is not playing today because he's lying in bed with my sister as they got married yesterday – Faf du Plessis
😂
#MSLT20 #NMBGvPR #PRvNMBG pic.twitter.com/IOlXZEn7nH— FANTASY CRICKET TIPS 🏏 (@FantasyCricTeam) December 8, 2019
ಪಾರ್ಲ್ ರಾಕ್ಸ್ ಮತ್ತು ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ನಡುವೆ ಭಾನುವಾರ ನಡೆದ ಪಂದ್ಯದ ಟಾಸ್ ವೇಳೆ, ಟಾಸ್ ಸೋತ ನಂತರ ಮಾತನಾಡಿದ್ದ ಫಾಫ್ ಡುಪ್ಲೆಸಿಸ್ ಅವರು ಅಡುವ 11ರ ಬಳಗದಲ್ಲಿ ಹರ್ಡಸ್ ವಿಲ್ಜೋಯೆನ್ ಯಾಕೆ ಕೈಬಿಟ್ಟಿದ್ದೀರ ಎಂದು ಕೇಳಿದಾಗ, ಆತ ನಿನ್ನೆ ನನ್ನ ತಂಗಿಯ ಜೊತೆ ಬೆಡ್ ಮೇಲೆ ಮಲಗಿದ್ದ ಅದಕ್ಕೆ ನಾನು ಅವನನ್ನು ಆಡುವ 11ರ ಬಳಗದಿಂದ ಕೈಬಿಟ್ಟೆ ಎಂದು ತಿಳಿಸಿದ್ದಾರೆ.
ಈ ಹೇಳಿಕೆ ಕೇಳಿ ಸಂದರ್ಶಕ ಶಾಕ್ ಆದರು. ನಂತರ ಡುಪ್ಲೆಸಿಸ್ ಹರ್ಡಸ್ ನನ್ನ ತಂಗಿಯ ಜೊತೆ ನಿನ್ನೆ ಮದುವೆಯಾಗಿದ್ದಾರೆ. ಹೀಗಾಗಿ ಅವರು ಪಂದ್ಯಕ್ಕೆ ಲಭ್ಯವಿಲ್ಲ. ವಿವಾಹದ ಘಳಿಗೆಯನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದರು. ಹರ್ಡಸ್ ವಿಲ್ಜೋಯೆನ್ ಅವರು 2019ರ ಏಪ್ರಿಲ್ನಲ್ಲಿ ಡುಪ್ಲೆಸಿಸ್ ಅವರ ತಂಗಿ ರೆಮಿ ರೈನ್ನರ್ಸ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿಗೆ ಕಳೆದ ಶನಿವಾರ ವಿವಾಹವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
