ಆಂಧ್ರ ಹಾಗೂ ವಿದರ್ಭ ತಂಡಗಳ ನಡುವೆ 2019/20ನೇ ಆವೃತ್ತಿಯ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದ ವೇಳೆ ಆಕಸ್ಮಿಕವಾಗಿ ಹಾವು ಅಂಗಳಕ್ಕೆ ಪ್ರವೇಶ ಮಾಡಿತು. ಹಾಗಾಗಿ, ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಹಾವಿನ ವೀಡಿಯೋವನ್ನು ಬಿಸಿಸಿಐ ಡೊಮೆಸ್ಟಿಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
SNAKE STOPS PLAY! There was a visitor on the field to delay the start of the match.
Follow it live – https://t.co/MrXmWO1GFo#APvVID @paytm #RanjiTrophy pic.twitter.com/1GptRSyUHq
— BCCI Domestic (@BCCIdomestic) December 9, 2019
ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಮೊದಲ ದಿನದ ಪಂದ್ಯದ ವೇಳೆ ಹಾವೊಂದು ಕ್ರಿಕೆಟ್ ಮೈದಾನಕ್ಕೆ ಬಂದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಹಾವು ಹರಿಯುತ್ತಿರುವುದನ್ನು ಆಟಗಾರರು ದಿಗ್ಭ್ರಮೆಯಿಂದ ನೋಡುತ್ತಿರುವುದನ್ನು ನಾವು ಕಾಣಬಹುದು.
ಈ ವೇಳೆ ಹಾವು ಅಂಗಳ ಪ್ರವೇಶ ಮಾಡಿದ್ದರಿಂದ ತೀರ್ಪುಗಾರರು ಪಂದ್ಯವನ್ನು ನಿಲ್ಲಿಸಿದರು. ನಂತರ, ಅಂಗಳದ ಸಿಬ್ಬಂದಿ ಹಾವನ್ನು ಮೈದಾನದಿಂದ ಹೊರ ಅಟ್ಟುವಲ್ಲಿ ಯಸ್ವಿಯಾದರು. ನಂತರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿದರ್ಭ ನಾಯಕ ಫೈಜ್ ಫೈಜಾಲ್ ಆಂಧ್ರ ಪ್ರದೇಶದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಅಂಧ್ರಪ್ರದೇಶ ತಂಡವನ್ನು ಹನುಮಾ ವಿಹಾರಿ ಮುನ್ನಡೆಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
